ಬದಿಯಡ್ಕ: ಬದಿಯಡ್ಕದ ಪಟಾಕಿ ವ್ಯಾಪಾರಿ, ಮಾರ್ಪನಡ್ಕ ನಿವಾಸಿ "ಬೆಡಿ ಖಾದ್ರಿಚ್ಚ" ಎಂದೇ ಪರಿಚಿತರಾಗಿದ್ದ ಕೆ.ಎಂ ಅಬ್ದುಲ್ ಖಾದರ್(70) ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಹಲವಾರು ಕ್ಷೇತ್ರಗಳ ಉತ್ಸವಗಳಿಗೆ ಸುಡುಮದ್ದು ತಯಾರಿಸಿ ಪೂರೈಸುತ್ತಿದ್ದರು. ಬದಿಯಡ್ಕದ ಪೆರ್ಲ ರಸ್ತೆಯಲ್ಲಿ ಅಂಗಡಿ ತೆರೆದು ದೀರ್ಘ ಕಾಲದಿಂದ ಪಟಾಕಿ ವ್ಯಾಪಾರದಲ್ಲಿ ನಿರತರಾಗಿದ್ದರು.
2022ರಲ್ಲಿ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ನಡೆದ ಶ್ರೀರುದ್ರ ಹೈಮಾವತೀ ಮಹಾ ಯಾಗದ ಸಂದರ್ಭದಲ್ಲಿ ಇವರನ್ನು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸನ್ಮಾನಿಸಿದ್ದರು. ಇವರು ಪತ್ನಿ, ಐದು ಮಂದಿ ಮಕ್ಕಳನ್ನು ಅಗಲಿದ್ದಾರೆ.