HEALTH TIPS

ಮಲ್ಲಿಕಾರ್ಜುನ ಖರ್ಗೆ ಮಾತನಾಡುವ ವೇಳೆ ಮೈಕ್ರೋಫೋನ್​ ಆಫ್​; ಸಭಾತ್ಯಾಗ ಮಾಡಿದ ವಿಪಕ್ಷಗಳು

             ವದೆಹಲಿರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುವ ವೇಳೆ ಮೈಕ್ರೋಫೋನ್​ಗಳನ್ನು ಆಫ್​​ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

               ಈ ಕುರಿತು ಟ್ವೀಟ್​ ಮಾಡಿರುವ ಟಿಎಂಸಿ ಸಂಸದ ಡೆರೆಕ್​ ಓ ಬ್ರಿಯಾನ್​ ಈ ಘಟನೆ ಇಂದು ರಾಜ್ಯಸಭೆಯಲ್ಲಿ ನಡೆದಿದೆ.


                ಪ್ರತಿಪಕ್ಷ ನಾಯಕ ಮಾತನಾಡುವ ವೇಳೆ ಅವರ ಮೈಕ್​ ಆಫ್​ ಮಾಡಲಾಗಿದೆ. ಈ ಸಂಬಂಧ ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


               ಈ ಕುರಿತು ಟ್ವೀಟ್​ ಮಾಡಿರುವ ರಾಜ್ಯಸಭೆ ಸದಸ್ಯ ಜೈರಾಮ್​ ರಮೇಶ್​ ಮಣಿಪುರದಲ್ಲಿನ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ I.N.D.I.Aದ ಸದಸ್ಯರು ಒತ್ತಾಯಿಸಿದ ಖರ್ಗೆ ಅವರ ಮೈಕ್ರೋಫೋನ್​ಗಳನ್ನು ಆಫ್​ ಮಾಡಿಸುವ ಮೂಲಕ ಬಿಜೆಪಿ ನಾಯಕರು ತಡೆಯೊಡ್ಡಿದ್ದಾರೆ.

                 ವಿಪಕ್ಷ ನಾಯಕರ ಮಾತಿಗೆ ತಡೆಯೊಡ್ಡುವುದು. ಗದ್ದಲದಲ್ಲಿ ಮಸೂದೆಗಳನ್ನು ಅಂಗೀಕರಿಸುವುದು ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಲು ಕಾರಣ ಎಂದು ರಾಜ್ಯಸಭೆ ಸದಸ್ಯ ಜೈರಾಮ್​ ರಮೇಶ್​ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries