ಪುಣೆ: ಗೋಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತದಳಕ್ಕೆ ನೀಡಿದ ಪ್ರಕರಣದ ಆರೋಪಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಒ) ವಿಜ್ಞಾನಿ ಪ್ರದೀಪ್ ಕುರುಲ್ಕರ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ.
ಪುಣೆ: ಗೋಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತದಳಕ್ಕೆ ನೀಡಿದ ಪ್ರಕರಣದ ಆರೋಪಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಒ) ವಿಜ್ಞಾನಿ ಪ್ರದೀಪ್ ಕುರುಲ್ಕರ್ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ.
ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್) ಅಧಿಕೃತ ಗೋಪ್ಯತಾ ಕಾಯ್ದೆಯ ಸೆಕ್ಷನ್ 3 (ಕಣ್ಗಾವಲಿಗೆ ದಂಡ), ಸೆಕ್ಷನ್ 4 (ವಿದೇಶಿ ಏಜೆಂಟ್ ಜೊತೆಗೆ ಸಂವಹನ) ಮತ್ತು ಸೆಕ್ಷನ್ 5 (ತಪ್ಪು ಸಂವಹನ) ಅನ್ವಯ ಸುಮಾರು 1000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ್ ಫರ್ಗಡೆ ಹೇಳಿದರು.
ಕುರುಲ್ಕರ್ ಅವರು ಪಾಕಿಸ್ತಾನಿ ಏಜೆಂಟ್‌ಗೆ ಸೂಕ್ಷ್ಮ ಮಾಹಿತಿಯನ್ನು 'ಜರಾ ದಾಸ್‌ಗುಪ್ತಾ' ಹೆಸರಿನಲ್ಲಿ ರವಾನಿಸಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಆರೋಪಿಯ ಧ್ವನಿಪರೀಕ್ಷೆ ಮತ್ತು ಮಾನಸಿಕ ಸ್ಥಿತಿ ವಿಶ್ಲೇಷಣೆಗೆ ಅನುಮತಿ ಕೋರಿತ್ತು. ಆದರೆ, ಆರೋಪಿ ಪರ ವಕೀಲರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಪುಣೆಯಲ್ಲಿರುವ ಡಿಆರ್‌ಡಿಒ ಮಾನ್ಯತೆಗೊಳಪಟ್ಟ ಪ್ರಯೋಗಾಲಯದ ನಿರ್ದೇಶಕರಾಗಿದ್ದ ಕುರುಲ್ಕರ್ ಅವರನ್ನು ಎಟಿಎಸ್ ಮೇ 3ರಂದು ಬಂಧಿಸಿತ್ತು.