ಧನಬಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಧನ್‌ಬಾದ್ ಜಿಲ್ಲೆಯ ಸಂಪರ್ಕ ಪ್ರಮುಖ್ ಶಂಕರ್ ಪ್ರಸಾದ್ (55) ಅವರನ್ನು ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಡುಮ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪ್ರಸಾದ್ ಮನೆಯಿಂದ 500 ಮೀಟರ್ ದೂರದಲ್ಲೇ ಬುಧವಾರ ಬೆಳಿಗ್ಗೆ ಅವರ ಮೃತದೇಹ ಬುಲೆಟ್ ಜೊತೆಗೆ ಪತ್ತೆಯಾಗಿದೆ ಎಂದು ಪೂರ್ವ ಟುಂಡಿ ಪೊಲೀಸ್ ಠಾಣಾಧಿಕಾರಿ ಕೃಷ್ಣಕುಮಾರ್ ಹೇಳಿದ್ದಾರೆ.
ಪೂರ್ವ ಟುಂಡಿಯ ಬ್ಲಾಕ್ ತೋಟಗಾರಿಕೆ ಅಧಿಕಾರಿಯಾಗಿದ್ದ ಪ್ರಸಾದ್ ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ವನವಾಸಿ ಕಲ್ಯಾಣ ಕೇಂದ್ರದ ಸದಸ್ಯರೂ ಆಗಿದ್ದ ಇವರೊಟ್ಟಿಗೆ ಹಲವಾರು ಕೃಷಿ ಮಿತ್ರರು ಕೆಲಸ ಮಾಡುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
'ಮಂಗಳವಾರ ರಾತ್ರಿ 9.30ರ ವೇಳೆಗೆ ಪ್ರಸಾದ್ ತಮ್ಮ ಬುಲೆಟ್‌ನಲ್ಲಿ ಮನೆಯಿಂದ ಹೊರಹೋಗಿದ್ದರು. ಬುಧವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಗ್ರಾಮದಲ್ಲಿ ಹೊಂದಿದ್ದ ಜಮೀನಿಗೆ ಸಂಬಂಧಿಸಿದ ವ್ಯಾಜ್ಯವಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು' ಎಂದು ಕುಟುಂಬದವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
'ಕೊಲೆಗಾರರನ್ನು ತಕ್ಷಣವೇ ಬಂಧಿಸಬೇಕು. ಪ್ರಸಾದ್ ಹತ್ಯೆ ಸಂಚಿನ ಕೃತ್ಯ' ಎಂದು ಆರ್‌ಎಸ್‌ಎಸ್‌ನ ಜಿಲ್ಲಾ ಸಹ ಸೇವಾ ಪ್ರಮುಖ್ ರಾಮ್‌ಪ್ರತಾಪ್ ಕುಂಭಕರ್ ಆಗ್ರಹಿಸಿದ್ದಾರೆ.
ಪೂರ್ವ ಟುಂಡಿ ಬ್ಲಾಕ್ ಮಾವೋವಾದಿಗಳ ಹಿಡಿತದಲ್ಲಿದೆ. ಗ್ರಾಮ ರಕ್ಷಣಾ ದಳದ ಸದಸ್ಯರಾಗಿದ್ದ ಪ್ರಸಾದ್, ಈ ಭಾಗದಲ್ಲಿ ನಡೆಯುತ್ತಿದ್ದ ಮರಳು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು.