ಪೆರ್ಲ : ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ನೇತಾರ ಉಮ್ಮಾನ್ ಚಾಂಡಿ ನಿಧನಕ್ಕೆ ಪೆರ್ಲದಲ್ಲಿ ಸರ್ವ ಪಕ್ಷ ಸಂತಾಪ ಸಭೆ ಗುರುವಾರ ಸಂಜೆ ಕೃಷಿ ಭವನದ ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ನ ಹಿರಿಯ ಮುಂದಾಳು ಮಿತ್ತೂರು ಪುರುμÉೂೀತ್ತಮ ಭಟ್ ಅಧ್ಯಕ್ಷತೆವಹಿಸಿದ್ದರು.ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್, ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ್,ಬ್ಲೋಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್,ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್, ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿ ಅಧ್ಯಕ್ಷ ಸುಮಿತ್ ರಾಜ್, ಮುಸ್ಲಿಂ ಲೀಗ್ ನೇತಾರರಾದ ಎ.ಕೆ.ಶೇರಿಪ್, ಹಮಿದಾಲಿ,ಮಹಮ್ಮದಾಲಿ ಪೆರ್ಲ, ಆಯಿμÁ ಎ.ಎ, ಸಿಪಿಐಎಂ ನೇತಾರ ರಾಮಕೃಷ್ಣ ರೈ ಕುದ್ವ, ಶಶಿಧರ, ಸಿಪಿಐ ನೇತಾರರಾದ ನರಸಿಂಹ ಪೂಜಾರಿ, ರಾಮಚಂದ್ರ ಎಂ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕ ಅಧ್ಯಕ್ಷ ಟಿ.ಪ್ರಸಾದ್,ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲಾಧ್ಯಕ್ಷ ಫಾರೂಕ್ ಪಳ್ಳಂ,ಮಹಿಳಾ ಕಾಂಗ್ರೆಸ್ ನ ಕುಸುಮಾವತಿ ಟೀಚರ್,ಜಲಜಾಕ್ಷಿ, ಜಯಶ್ರೀ ಎ.ಕುಲಾಲ್, ಬ್ಲಾಕ್ ಕಾಂಗ್ರೆಸ್ ನೇತಾರರಾದ ರವೀಂದ್ರನಾಥ ನಾಯಕ್ ಶೇಣಿ ಮೊದಲಾದವರು ಮಾತನಾಡಿದರು.