ಬದಿಯಡ್ಕ: ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಸಹಯೋಗದಲ್ಲಿ "ಗ್ರಾಮ ಪರ್ಯಟನೆ" ಕಾರ್ಯಕ್ರಮ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಭಾನುವಾರ ನಡೆಯಿತು.
ರಂಗಸಿರಿ ವೇದಿಕೆ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ಕನ್ನೆಪ್ಪಾಡಿ ಜನಸೇವಾ ವಿಶ್ವಸ್ಥ ನಿಧಿ ಆಶ್ರಯ ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ "ಗಡಿನಾಡಿನ ಕನ್ನಡ ಮಾಧ್ಯಮದ ಸವಾಲುಗಳು" ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಜಯ ಮಣಿಯಂಪಾರೆ ವಿಚಾರ ಮಂಡಿಸಿದರು. ಈ ಸಂದರ್ಭ ವ್ಯಾಪಾರಿ ಸಂಘಟನೆ ನೇತಾರ ಸುಬ್ರಹ್ಮಣ್ಯ ಭಟ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ನಂತರದ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ನಡೆಯಿತು. ಡಾ. ಶ್ರೀಶ ಕುಮಾರ ಪಂಜಿತಡ್ಕ ಕಾರ್ಯಕ್ರಮ ನಿರೂಪಿಸಿದರು. ಕು. ಅಭಿಜ್ಞಾ ಭಟ್ ವಂದಿಸಿದರು.