HEALTH TIPS

ಎಲತ್ತೂರು ರೈಲುಬೋಗಿ ಅಗ್ನಿ ಅವಘಡ ಪ್ರಕರಣ: ಶಾರುಖ್ ಸೈಫೀಗೆ ಭಯೋತ್ಪಾದಕ ಸಂಘಟನೆಗಳ ಬೇರುಗಳನ್ನು ಹೊಂದಿರುವ ದೇಶಗಳೊಂದಿಗೆ ಸಂಪರ್ಕ: ತನಿಖಾ ತಂಡದಿಂದ ಪತ್ತೆ

                 ಕೊಚ್ಚಿ: ಎಲತ್ತೂರು ರೈಲುಬೋಗಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಶಾರುಖ್ ಸೆಫಿ ಅಂತಾರಾಷ್ಟ್ರೀಯ ಸಂಪರ್ಕ ಹೊಂದಿರುವುದನ್ನು ಎನ್ಐಎ ಪತ್ತೆ ಮಾಡಿದೆ. ಭಯೋತ್ಪಾದಕ ಸಂಘಟನೆಗಳ ಬೇರುಗಳನ್ನು ಹೊಂದಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಜನರೊಂದಿಗೆ ಆತ ಸಂವಹನ ನಡೆಸುತ್ತಿದ್ದ ಎಂದು ತನಿಖಾ ತಂಡ ಪತ್ತೆ ಮಾಡಿದೆ.

             ಶಾರುಖ್‍ನಿಂದ ವಶಪಡಿಸಿಕೊಂಡ ಇಂಟರ್‍ನೆಟ್ ಪ್ರೊಟೋಕಾಲ್ ವಿವರಗಳ ದಾಖಲೆಯನ್ನು ಪರಿಶೀಲಿಸಿದಾಗ ಮಹತ್ವದ ಮಾಹಿತಿ ಹೊರಬಿದ್ದಿದೆ.

             ಶಾರುಖ್ ಸೈಫೀ ಈ ದೇಶಗಳ ಐಪಿ ವಿಳಾಸಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್ ಮೂಲಕ ಹಲವು ಸೈಟ್‍ಗಳನ್ನು ಹುಡುಕುತ್ತಿರುವುದು ಪತ್ತೆಯಾಗಿದೆ.ಇದು ಅನುಮಾನಗಳನ್ನು ಹೆಚ್ಚಿಸಿದೆ. ಮಲೆಯಾಳಿ ಐಎಸ್ ಭಯೋತ್ಪಾದಕರು ಕೇರಳದಲ್ಲಿ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಎಲತ್ತೂರ್ ರೈಲು ದಾಳಿಗೂ ಐಎಸ್ ಮಾಡ್ಯೂಲ್ ಗಳಿಂದಲೇ ಯೋಜನೆ ರೂಪಿಸಲಾಗಿದೆ ಎಂಬ ಶಂಕೆ ಬಲವಾಗಿದೆ. ಇತರ ಕೆಲವು ರೈಲುಗಳನ್ನು ಸ್ಪೋಟಿಸಲು ಸಹ ಶಾರುಖ್ ಗುರಿಯಾಗಿಸಿಕೊಂಡಿದ್ದ ಎಂದು ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ತನಿಖೆ ಪ್ರಗತಿಯಲ್ಲಿದೆ. ಶಾರುಖ್ ನ Á್ಯಯಾಂಗ ಬಂಧನವನ್ನು 180 ದಿನಗಳವರೆಗೆ ವಿಸ್ತರಿಸಲಾಗಿದೆ.

            ಎಪ್ರಿಲ್ 2ರ ರಾತ್ರಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್ ಎಲತ್ತೂರ್ ನಿಲ್ದಾಣದಿಂದ ಹೊರಡುತ್ತಿದ್ದಂತೆಯೇ ಡಿ-ಒನ್ ಕಂಪಾರ್ಟ್‍ಮೆಂಟ್‍ಗೆ ಆಗಮಿಸಿದ ಶಾರುಖ್ ಪ್ರಯಾಣಿಕರ ಮೇಲೆ ಪೆಟ್ರೋಲ್ ಎಸೆದು ಬೆಂಕಿ ಹಚ್ಚಿದ್ದ. ಟ್ರ್ಯಾಕ್‍ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಆದರೆ ಅದೇ ದಿನ ಶಾರುಖ್ ಸೈಫಿ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದು ನಿಗೂಢತೆಯನ್ನು ಹೆಚ್ಚಿಸಿದೆ. ಮಲೆಯಾಳಿ ಐಎಸ್ ಭಯೋತ್ಪಾದಕರು ರಾಜ್ಯದಲ್ಲಿ ಉಗ್ರರ ದಾಳಿಗೆ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿತ್ತು. ಎಲತ್ತೂರ್ ರೈಲು ದಾಳಿಯ ಹಿಂದೆ ಇದೇ ಐಎಸ್ ಮಾಡ್ಯೂಲ್‍ಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries