ಕಾಸರಗೋಡು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ 2020) ಸೂಚಿಸಿದಂತೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರೀಯ ವಿಶ್ವ ವಿದ್ಯಾಲಯ ಡೀನ್ ಅಕಾಡೆಮಿಕ್ ಪೆÇ್ರ.ಅಮೃತ್ ಜಿ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಇಲಾಖೆಗಳಲ್ಲಿ ಈ ವರ್ಷದಿಂದ ನಾಲ್ಕುವರ್ಷದ ಪದವಿ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿವೆ. ಶಿಕ್ಷಣ ಇಲಾಖೆಯು ಬಿಎಸ್ಸಿ ಬಿಇಡಿ(ಫಿಸಿಕ್ಸ್), ಬಿಎಸ್ಸಿ ಬಿಇಡಿ(ಝುವಾಲಜಿ), ಬಿಎ ಬಿಇಡಿ(ಇಂಗ್ಲಿಷ್), ಬಿಎ ಬಿಇಡಿ(ಎಕನಾಮಿಕ್ಸ್), ಬಿಕಾಂ ಬಿಇಡಿಯಲ್ಲಿ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ. ಬಿ ಕಾಮ್ ಬಿಇಡಿಯಲ್ಲಿ 50 ಮತ್ತು ಇತರರ ವಿಷಯಗಳಲ್ಲಿ ತಲಾ 25 ಸ್ಥಾನ ನೀಡಲಾಗಿದೆ. ಇಂಟನ್ರ್ಯಾಷನಲ್ ರಿಲೇಶನ್ಸ್‍ನಲ್ಲಿ ಅಸ್ತಿತ್ವದಲ್ಲಿರುವ ಮೂರು ವರ್ಷಗಳ ಯುಜಿ ಕಾರ್ಯಕ್ರಮವನ್ನು ಈ ವರ್ಷದಿಂದ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮವಾಗಿ ಪರಿವರ್ತಿಸಲಾಗುತ್ತದೆ.
ಬಿಎ ಆನರ್ಸ್ ವಿತ್ ಇಂಟರ್‍ನ್ಯಾಶನಲ್ ರಿಸರ್ಚ್ ಎಂಬ ಕಾರ್ಯಕ್ರಮ ಇದಾಘಿದೆ. ವಿದ್ಯಾರ್ಥಿಗಳು ಅದೇ ಕೋರ್ಸ್‍ನ ಭಾಗವಾಗಿ ಪ್ರಮುಖ ಐಚ್ಛಿಕ ವಿಷಯದಲ್ಲಿ ಪ್ರಮುಖ ಪದವಿ ಜತೆಗೆ ಇತರ ವಿಷಯಗಳಲ್ಲಿ ಸಣ್ಣ ಪದವಿಯನ್ನು ಪಡೆಯಬಹುದಾಗಿದೆ. ಅಂತಿಮ ವರ್ಷದಲ್ಲಿ ಮೇಜರ್‍ವಿಷಯದ ಬಗ್ಗೆ ಸಂಶೋಧನೆ ನಡೆಸಲು ಸಹ ಸಾಧ್ಯವಿದೆ. ಇದನ್ನು ನಡೆಸುವ ವಿದ್ಯಾರ್ಥಿ ಪಿಜಿ ಇಲ್ಲದೆಯೇ ಪಿಎಚ್‍ಡಿ ಸೇರಬಹುದಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲಿದ್ದಾರೆ. ಯೋಜನೆಯಿಂದ ಕೇರಳ ಮತ್ತು ವಿಶೇಷವಾಗಿ ಕಾಸರಗೋಡು ಜಿಲ್ಲೆಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿಶ್ವ ವಇದ್ಯಾಲಯದಲ್ಲಿ 70 ಕೋಟಿ ಮೊತ್ತದ ಮೂಲಸೌಕರ್ಯ ಕಾಮಗಾರಿ ಶೀಘ್ರ ಆರಂಭವಾಗಲಿದೆ. ತರಗತಿ ಕೊಠಡಿಗಳು, ಲ್ಯಾಬ್‍ಗಳು, ಹಾಸ್ಟೆಲ್‍ಗಳು ಇತ್ಯಾದಿಗಳನ್ನು ನಿರ್ಮಿಸುವುದು ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಎನ್‍ಇಪಿ 2020 ಅನುಷ್ಠಾನ ಸಂಯೋಜಕ ಪೆÇ್ರ.ಜೋಸೆಫ್ ಕೊಯಿಪಲ್ಲಿ, ವಿಶೇಷ ಕರ್ತವ್ಯಾಧಿಕಾರಿ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಸುಜಿತ್ ಉಪಸ್ಥಿತರಿದ್ದರು.