ಕಾಸರಗೋಡು: ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಸಕ್ರಿಯ ಸದಸ್ಯರಾಗಿರುವ ಕಾರ್ಮಿಕರ ಮಕ್ಕಳಿಗೆ ಕಲಿಕೋಪಕರಣಗಳ ವಿತರಣೆ ಮತ್ತು ಜಾಗೃತಿ ತರಗತಿಯ ಉದ್ಘಾಟನೆ ಕಾಞಂಗಾಡ್ ಜಿಲ್ಲಾ ಕಾರ್ಯನಿರ್ವಾಹಕರ ಕಚೇರಿಯಲ್ಲಿ ನಡೆಯಿತು.
ಕಾಞಂಗಾಡು ನಗರಸಭೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಲಹಾ ಸಮಿತಿ ಸದಸ್ಯ ಕೆ.ಉಣ್ಣಿ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಪಿ.ವಿ.ಬಾಲಕೃಷ್ಣನ್, ಪಿ.ವಿಜಯಕುಮಾರ್, ಗಿರಿಕೃಷ್ಣನ್, ಕೆ.ಗಿರೀಶ್, ಸಿ.ರವಿ, ಎಂ.ಪಿ.ಬಿಜೀಶ್, ಶಂಸೀರ್ ತ್ರಿಕರಿಪುರ, ವಿ.ವಿ.ಸುಧಾಕರನ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಎಸ್.ಸುಬಾಷ್ ಜಾಗೃತಿ ತರಗತಿ ನಡೆಸಿದರು. ಜಿಲ್ಲೆಯ ವಿವಿಧ ಮೋಟಾರು ಕಾರ್ಮಿಕರ ಸಂಘದ ಮುಖಂಡರು, ಮೋಟಾರು ವಲಯದ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೆಡ್ ಕ್ಲರ್ಕ್ ಎಂ.ಕೆ.ಓಮನಾ ಸ್ವಾಗತಿಸಿದರು. ಕಚೇರಿ ಸಿಬ್ಬಂದಿ ಕೆ.ವಿ.ಸಿಂಧು ವಂದಿಸಿದರು.