ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ 3ನೇ ಚಾತುರ್ಮಾಸ್ಯ ವ್ರತಾಚರಣೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಜರಗಿದ ‘ನಾದ ವೈಭವ’ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಸುಪ್ರಸಿದ್ಧ ಪಿಟೀಲು ವಾದಕ ವಿದ್ವಾನ್ ವಿಠಲ ರಾಮಮೂರ್ತಿ ಹಾಗೂ ವಿದುಷಿ ಪದ್ಮಾ ಶಂಕರ್ ಅವರ, ವಿಧವಿಧ ಕೀರ್ತನೆಗಳು ಕೇಳುಗರ ಮನಸೂರೆಗೊಂಡಿತು. ಮೃದಂಗದಲ್ಲಿ ವಿದ್ವಾನ್ ಪತ್ರಿ ಸತೀಶ್ ಕುಮಾರ್, ಖಂಜೀರದಲ್ಲಿ ವಿದ್ವಾನ್ ಬಿ. ಸುಂದರ ಕುಮಾರ್ ಸಾಥ್ ನೀಡಿದ್ದರು.