ಕಣ್ಣೂರು: ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ವಿರುದ್ದ ತನಿಖೆ ಕಣ್ಣೂರಿನ ಪ್ರಮುಖ ನಾಯಕ ಸೇರಿದಂತೆ ಹಲವರನ್ನು ಕೇಂದ್ರೀಕರಿಸಿ ವಿಸ್ತರಿಸಿದೆ. ವಿಜಿಲೆನ್ಸ್‍ನ ತನಿಖೆಯು ಕಣ್ಣೂರಿನ ಪ್ರಮುಖ ಕಾಂಗ್ರೆಸ್ ಮುಖಂಡ ಮತ್ತು ಉದ್ಯಮಿಯೊಬ್ಬರ ಅಂಗಳ ತಲಪಿದೆ.
ಇವರಲ್ಲಿ ಒಬ್ಬರು ತಳಿಪರಂಬದಲ್ಲಿ ಎಕರೆಗಟ್ಟಲೆ ಜಮೀನು ಖರೀದಿಸಿರುವ ಬಗ್ಗೆ ವಿಜಿಲೆನ್ಸ್‍ಗೆ ಮಾಹಿತಿ ಲಭಿಸಿದೆ. ಅದರ ಹಣಕಾಸಿನ ಮೂಲವನ್ನು ತನಿಖೆ ಮಾಡಲಾಗುವುದು. ಈ ಹಿಂದೆ ಒಬ್ಬ ದಿವಂಗತ ನಾಯಕನಿಂದ ಹಣ ಪಡೆದು ಹಿಂತಿರುಗಿಸದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯ ಕಾಂಗ್ರೆಸ್‍ನಲ್ಲಿ ಈ ಹಿಂದೆ ಚರ್ಚೆಯಾಗಿತ್ತು.
ಕೆ. ಸುಧಾಕರನ್‍ನಿಂದ ದೂರ ಸರಿದು ನಂತರ ರಾಜ್ಯ ನಾಯಕರೊಬ್ಬರ ಮಧ್ಯಸ್ಥಿಕೆಯಿಂದ ಸುಧಾಕರನ್‍ಗೆ ಹತ್ತಿರವಾದ ವ್ಯಕ್ತಿಯೂ ತನಿಖೆಯಲ್ಲಿದ್ದಾರೆ. ಕೆ. ಕರುಣಾಕರನ್ ಸ್ಮರಣಾರ್ಥ ಚಿರಕಲ್ ರಾಜಾಸ್ ಶಾಲೆಯನ್ನು ಖರೀದಿಸುವ ಕ್ರಮದ ಭಾಗವಾಗಿ ಟ್ರಸ್ಟ್ ರಚಿಸಿ ಸಂಗ್ರಹಿಸಿದ ಹಣವನ್ನು ನಿರ್ವಹಿಸಿದ್ದಾರೆ ಎಂಬ ಮಾಹಿತಿ ವಿಜಿಲೆನ್ಸ್ ಲಭಿಸಿದೆ.
ಶಾಲೆಯನ್ನು ಟ್ರಸ್ಟ್ ಹೆಸರಿನಲ್ಲಿ ಖರೀದಿಸಿ ಬಳಿಕ ಬೇರೆ ಹೆಸರಿನಲ್ಲಿ ದಾಖಲಾತಿಗೊಳಿಸಲು ಮುಂದಾದಾಗ ಚಿರಕಲ್ ಕೋವಿಲಕಂ ಅಧಿಕಾರಿಗಳು ಹಿಂದೆ ಸರಿದಿದ್ದು, ನಂತರ ಚಿರಕಲ್ ನ ಸಹಕಾರಿ ಬ್ಯಾಂಕ್ ನಿಂದ ಶಾಲೆಯನ್ನು ಖರೀದಿಸಲಾಗಿದೆ. ಈಗಾಗಲೇ ಟ್ರಸ್ಟ್ ಹೆಸರಿನಲ್ಲಿ ಹಣಕಾಸು ಕ್ರೋಢೀಕರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಟ್ವಿಸ್ಟ್ ಪಡೆದಿದೆ. ಇದೀಗ ಕ್ರೈಂ ಬ್ರಾಂಚ್ ತನಿಖೆಗೆ ಹೆಚ್ಚು ಹೆಸರು ಬರುತ್ತಿರುವುದರಿಂದ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿಗೆ ಸಿಲುಕುವುದು ಖಚಿತವಾಗಿದೆ.