ಉಪ್ಪಳ: ಕಯ್ಯಾರ್ ಡೋನ್ ಬೋಸ್ಕೊ ಶಾಲೆಯವಾರ್ಷಿಕ ಮಹಾಸಭೆಯು ಶಾಲಾ ಸಭಾಂಗಣಲ್ಲಿ ನಡೆಯಿತು. ಶಾಲಾ ಸಂಚಾಲಕ ಫಾದರ್ ವಿಶಾಲ್ ಮೆಲ್ವಿನ್ ಮೊನಿಸ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಮಚಾದೊ, ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ್, ಮಾತೃ ಸಂಘದ ಅಧ್ಯಕ್ಷೆ ರಶ್ಮಿ , ಮುಖ್ಯೋಪಾಧ್ಯಾಯ ಪೀಟರ್ ರಾಡ್ರಿಗಸ್,ಹಿರಿಯ ಶಿಕ್ಷಕಿ ಮಾಗ್ದೆಲೆನ್ ಟೀಚರ್, ನಿರ್ಮಲ, ಜಯ ಟೀಚರ್,ಸಿಸ್ಟರ್ ಜಾಸ್ಮಿನ್, ಸಿಸ್ಟರ್ ರೀನಾ ಉಪಸ್ಥಿತರಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಕಾರ್ಯಕಾರಿಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಝಡ್. ಎ ಕಯ್ಯಾರ್, ಮಾತೃ ಸಂಘದ ಅಧ್ಯಕ್ಷೆ ಯಾಗಿ ರೇಷ್ಮಾ ಡಿಸೋಜ ಆಯ್ಕೆಯಾದರು.