ಬದಿಯಡ್ಕ: : ಬದಿಯಡ್ಕದ ಜನಾನುರಾಗಿ ವೈದ್ಯರಾಗಿ ಗುರುತಿಸಿಕೊಂಡಿರುವ ಡಾ.ಶ್ರಿನಿಧಿ ಸರಳಾಯರ ಸಮಾಜಿಕ ಸಾಂಸ್ಕøತಿಕ,ಸಾಹಿತ್ಯಿಕ ಹಾಗೂ ವೈದ್ಯಕೀಯ ಸೇವೆಯನ್ನು ಗುರುತಿಸಿ ಮಂಗಳೂರಿನ ಕಸ್ತೂರ್ಬ ಮೆಡಿಕಲ್ ಕಾಲೇಜು ವತಿಯಿಂದ ವೈದ್ಯರ ದಿನಾಚರಣೆಯಂಗವಾಗಿ ಸನ್ಮಾನಿಸಲಾಯಿತು. ಮಂಗಳೂರಿನ ಹೋಟೆಲ್ ಅತ್ತಾವರದ ಕನ್ ವೇನ್ಶನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಕೆಎಂಸಿ ಮೆಡಿಕಲ್ ಸೂಪರಿಡೆಂಟ್ ಡಾ.ಜೋನ್ ರಾಂಪುರಂ, ರಿಜೀನಲ್ ಚೀಫ್ ಆಪರೇಟಿಂಗ್ ಆಫೀಸರ್ ಸಾಗಿರ್ ಸಿದ್ದಿಕ್ ಅವರ ಶಿಫಾರಸಿನಂತೆ ಸನ್ಮಾನ ಪತ್ರ ಹಾಗೂ ಗೌರವಾದರಗಳನ್ನು ನೀಡಿ ಸನ್ಮಾನಿಸಲಾಗಿದೆ. ಸಮಾರಂಭದಲ್ಲಿ ಹೃದ್ರೋಗ ತಜ್ಞ ಡಾ.ನರಸಿಂಹ ಪೈ,ಡಾ.ಪದ್ಮನಾಭ ಕಾಮತ್, ಡಾ.ಅತಿಮಾನ್,ಉದಯ ಕುಮಾರ್, ಡಾ.ಮಯೂರು ಪ್ರಭು ಮೊದಲಾದವರು ಭಾಗವಹಿಸಿದ್ದರು.
ಡಾ.ಶ್ರೀನಿಧಿ ಸರಳಾಯರು ಹೆಸರಿನಂತೆಯೇ ಸರಳ ಸಜ್ಜನಿಕೆಯನ್ನು ಮೈಗೂಢಿಸಿಕೊಂಡು ಪ್ರತಿಯೋರ್ವರಲ್ಲಿಯೂ ಸದಾ ಮಂದಸ್ಮಿತರಾಗಿ ವೈದ್ಯಕೀಯ ಸಲ್ಲಿಸುತ್ತಾ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಬದಿಯಡ್ಕದಲ್ಲಿ ಪ್ರಪ್ರಥಮ ಬಾರಿಗೆ ತುಳುವೆರೆ ಆಯನೋ ನಡೆಸಿದ ಸಂಘಟನಾ ಪದಾಧಿಕಾರಿಯಾಗಿದ್ದು ವಿಶ್ವ ತುಳುವೆರೆ ಆಯನೋದಂತಹ ಕಾರ್ಯಕ್ರಮವನ್ನು ಏರ್ಪಡಿಸುವಲ್ಲಿ ಮುಂದಾಳುತ್ವವಹಿಸಿಕೊಂಡ ಇವರು ತುಳುವೆರೆ ಆಯನೋ ಕೂಟದ ಮಾಜಿ ಅಧ್ಯಕ್ಷರಾಗಿದ್ದಾರೆ. ವಷರ್ಂಪ್ರತಿ ತುಳುನಾಡಿನ ಆಚರಣೆಯಾದ ಆμÁಢ ಮಾಸದ ಅಮವಾಸ್ಯೆಯಂದು ಹಾಲೆ ಮರದ ಕೆತ್ತೆಯ ಔಷಧೀಯ ರಸ ಸಂಗ್ರಹಿಸಿ ಸಾರ್ವಜನಿಕವಾಗಿ ವಿತರಿಸುವ ಕೈಂಕರ್ಯವನ್ನು ಕಳೆದ ಹನ್ನೆರಡು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಇವರು ಕಿಳಿಂಗಾರಿನ ಸಾಯಿರಾಮ್ ಸಭಾಂಗಣದಲ್ಲಿ ಪ್ರತಿ ಶನಿವಾರ ನಡೆಯುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ರೋಗಿಗಳ ತಪಾಸಣೆ ನಡೆಸುತ್ತಿರುವುದಲ್ಲದೆ ದಿ.ಡಾ.ಮಾಲಿನಿ ಸರಳಾಯರ ಸ್ಮರಣಾರ್ಥ ಬದಿಯಡ್ಕದಲ್ಲಿ ಕಳೆದ ಹಲವು ವರ್ಷಗಳಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಉತ್ತಮ ಸಾಹಿತ್ಯಭಿಮಾನಿಗಳಾದ ಡಾ.ಶ್ರೀನಿಧಿ ಅವರು ಕಥಾ ಸಂಕಲನವೊಂದನ್ನು ರಚಿಸಿ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿಸಿದ್ದಾರೆ.