ಕಾಸರಗೋಡು: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಕಾಸರಗೋಡು ವಿಭಾಗದ ನೇತೃತ್ವದಲ್ಲಿ ವನಮಹೋತ್ಸವ ಕಾಯ್ಕ್ರಮ ವಾಯಕ್ಕೋಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಶಾಲಾ ವಠಾರದಲ್ಲಿ ಆರಂಭಿಸಲಾದ 'ಊರ ಮಾವು-ನೆರಳಿನ ಮರ'ಮಕ್ಕಳ ವನ ಯೋಜನೆಯನ್ವಯ ನಡೆದ ಯೋಜನೆಯನ್ನು ಮಡಿಕೈ ಗ್ರಾಮ ಪಂಚಾಯಿತಿ ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮಾ ಪದ್ಮನಾಭನ್ ಉದ್ಘಾಟಿಸಿದರು. ಹೊಜದುರ್ಗ ಉಪಜಿಲ್ಲಾ ಶಿಕ್ಷಣಾಧಿಕಾರಿ ಪಿ.ಗಂಗಾಧರನ್ ಮುಖ್ಯ ಅತಿಥಿಯಾಗಿದ್ದರು. ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ವಾರ್ಡ್ ಸದಸ್ಯ ಎ.ವೇಲಾಯುಧನ್ ಮಾತನಾಡಿದರು.