ಕೀವ್: ನ್ಯಾಟೊ ಶೃಂಗಸಭೆಯಿಂದ ಅತ್ಯುತ್ತಮ ಫಲಿತಾಂಶ ಹೊರಬರಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯಾಟೊಗೆ ಉಕ್ರೇನ್ ಸೇರ್ಪಡೆಗೆ ಶೃಂಗಸಭೆ ಸಮ್ಮತಿಸಲಿದೆ ಎಂದು ಉಕ್ರೇನ್ ನಿರೀಕ್ಷಿಸಿದೆ.

ಪೋಲಂಡ್ ಅಧ್ಯಕ್ಷ ಆಯಂಡ್ರೆಜ್ ಡುಡ ಅವರೊಂದಿಗೆ ಭೇಟಿಯ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಝೆಲೆನ್‌ಸ್ಕಿ ಅವರು, 'ಉಕ್ರೇನ್‌ಗೆ ಅತ್ಯುತ್ತಮ ಫಲಿತಾಂಶ ಪಡೆಯಲು ಒಟ್ಟುಗೂಡಿ ಕಾರ್ಯನಿರ್ವಹಿಸಲು ಸಿದ್ಧವಿದ್ದೇವೆ' ಎಂದು ಹೇಳಿದರು.
ನ್ಯಾಟೊಗೆ ಉಕ್ರೇನ್ ಸೇರ್ಪಡೆಯಾಗಲು ಪೋಲಂಡ್ ಬೆಂಬಲಿಸುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ಭದ್ರತೆ ಕುರಿತಂತೆ ಇತರೆ ಸದಸ್ಯ ರಾಷ್ಟ್ರಗಳಿಂದ ಖಚಿತ ಭರವಸೆ ಬೇಕು ಎಂದು ಪೋಲಂಡ್ ಪ್ರತಿಪಾದಿಸಿದೆ.
ಯುದ್ಧ ಮುಗಿಯುವವರೆಗೆ ನ್ಯಾಟೊಗೆ ಸೇರ್ಪಡೆ ಸಾಧ್ಯ ಎಂದು ನಾನು ಭಾವಿಸುವುದಿಲ್ಲ. ನ್ಯಾಟೊ ಬಳಗಕ್ಕೆ ಉಕ್ರೇನ್ ಸೇರ್ಪಡೆಗೊಳಿಸುವ ಇಂಗಿತವನ್ನು ಶೃಂಗಸಭೆ ನೀಡಬಹುದು ಎಂದು ಆಶಿಸಿದ್ದೇನೆ ಎಂದು ಝೆಲೆನ್‌ಸ್ಕಿ ಹೇಳಿದರು.