ಪೆರ್ಲ : ರಕ್ತದಾನ ಶಿಬಿರ ಜುಲೈ 30ರಂದು ಬೆಳಗ್ಗೆ ಪೆರ್ಲ ಶ್ರೀ ಶಮಕರ ಸದನದ ಸಭಾಂಗಣದಲ್ಲಿ ಜರುಗಲಿದೆ. ಪೆರ್ಲದ ಶ್ರೀ ಶಂಕರ ಸೇವಾ ಸಮಿತಿ, ನಾಲಂದ ಮಹಾ ವಿದ್ಯಲಯ ಪೆರ್ಲದ ಎನ್ನೆಸ್ಸೆಸ್ ಘಟಕ, ಬೇಂಗಪದವು ಶ್ರೀ ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘಟ ಹಾಗೂ ಪಡ್ರೆ ಚೆರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ಸೇವಾ ಟ್ರಸ್ಟ್ ವತಿಯಿಂದ ಶಿಬಿರ ಆಯೋಜಿಸಲಾಗಿದೆ. ಪುತ್ತೂರಿನ ರೋಟರಿ-ಕ್ಯಾಂಪ್ಕೋ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯುವುದು.