ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಬಾಲ ಸಭಾದ ಮಕ್ಕಳಿಗಾಗಿ ಸಜ್ಜಂ ಎಂಬ ತರಬೇತಿ ಕಾರ್ಯಗಾರ ನಡೆಸಿತು.
ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಶಿಕಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕಮ್ಯೂನಿಟಿ ಕೌನ್ಸಿಲರ್ ಪ್ರಸೀದಾ, ಕಮ್ಯೂನಿಟಿ ಮೆಂಟರ್ ಫಯರುನ್ನಿಸ ಶುಭಾಶಂಸನೆಗೈದರು. ಬಾಲಸಭಾ ಸಂಪನ್ಮೂಲೆ ಜಯಲಕ್ಷ್ಮಿ ಶೆಟ್ಟಿ ತರಗತಿ ನಡೆಸಿದರು. ಬಾಲ ಸಭಾ ಸಂಪನ್ಮೂಲ ವ್ಯಕ್ತಿ ಉದಯ ಕುಮಾರಿ ಸ್ವಾಗತಿಸಿ ಕಮ್ಯೂನಿಟಿ ಮೆಂಟರ್ ಭವ್ಯ ವಂದಿಸಿದರು.