ಮುಳ್ಳೇರಿಯ: ಚೆರುವತ್ತೂರಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಜೂನಿಯರ್ ವುಶು ಚಾಂಪಿಯನ್ ಶಿಪ್ ನಲ್ಲಿ ಚೆರುವತ್ತೂರು ಗ್ರ್ಯಾಂಡ್ ಮಾಸ್ಟರ್ ಅಕಾಡೆಮಿ 67 ಅಂಕಗಳಿಸುವ ಮೂಲಕ ಸಮಗ್ರ ಚಾಂಪಿಯನ್ ಆಯಿತು. ಮೈ ಕ್ಲಬ್ ಉಡುಂಬುತಲ ರನ್ನರ್ಸ್ ಅಪ್ ಆಯಿತು. ಜಿಲ್ಲೆಯ ವಿವಿಧ ಕ್ಲಬ್‍ಗಳಿಂದ ಸುಮಾರು 60 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚೆರುವತ್ತೂರು ಗ್ರ್ಯಾಂಡ್ ಮಾಸ್ಟರ್ ಅಕಾಡೆಮಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ. ವೈ.ಎಂ.ಕೆ. ರಾಜಶೇಖರನ್ ಉದ್ಘಾಟಿಸಿದರು. ಜಿಲ್ಲಾ ವುಶು ಸಂಘದ ಜಂಟಿ ಕಾರ್ಯದರ್ಶಿ ಟಿ ಕುಂಞÂ ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ. ಅಧ್ಯಕ್ಷ ಅಶೋಕನ್ ಹಾಗೂ ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣನ್ ಮಾಸ್ತರ್ ಸ್ಪರ್ಧೆಗಳ ವೀಕ್ಷಕರಾಗಿದ್ದರು. ಜಿಲ್ಲಾ ವರ್ತಕರ ಸಂಘದ ಯುವ ಘಟಕದ ಕಾರ್ಯದರ್ಶಿ ಎ.ಕೆ.ಅನ್ಸಾರ್ ಮಾತನಾಡಿದರು. ವುಶು ಸಂಘದ ಜಿಲ್ಲಾ ಕಾರ್ಯದರ್ಶಿ ಅನಿಲ್ ಮಾಸ್ತರ್ ಸ್ವಾಗತಿಸಿ, ಹಿರಿಯ ವುಶು ಆಟಗಾರ ನಿವೇದ್ ನಾರಾಯಣ ವಂದಿಸಿದರು. ವಿಜೇತರಿಗೆ ಟ್ರೋಫಿ ಮತ್ತು ಪದಕಗಳನ್ನು ವಿತರಿಸಲಾಯಿತು.
ಅಲನ್ ಪ್ರಕಾಶ್, ಮುಹಮ್ಮದ್ ಇರ್ಫಾನ್, ಮುಹಮ್ಮದ್ ಸಲ್ಮಾನ್, ಅರ್ಜುನ್, ಅದ್ವಿತ್, ದೀಕ್ಷಿತ್ ಗೋವಿಂದ್, ರೋಹಿತ್, ಮುಹಮ್ಮದ್.ಯುಕೆ, ಮುಹಮ್ಮದ್ ಸಹಲ್, ವೈಭವ್. ಎನ್.ಪಿ., ಉದಯ ಶಂಕರ್ ಪಾಲೇರಿ, ಮುಹಮ್ಮದ್ ರಮಶಾದ್, ಅಕ್ಷಯ್, ಆನಂದು ಸೋನ್, ಮುಹಮ್ಮದ್ ಜಜೀರ್, ಅವನಿ, ಶಿವ ವಿದ್ಯಾ, ಶಿವ ರಂಜಿನಿ, ದೇವಿಕಾ, ಅನಾಮಿಕಾ, ರೇವತಿ ಮತ್ತು ಶ್ರೀಲಕ್ಷ್ಮಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.