ಕುಂಬಳೆ: ಶಾಲಾ ಸಮಯ ಮತ್ತು ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಕ್ಕಳಲ್ಲಿ ಮಾದಕ ದ್ರವ್ಯ ಸೇವನೆ ಸೇರಿದಂತೆ ಕೆಟ್ಟ ಅಭ್ಯಾಸಗಳು ಮತ್ತು ದುಷ್ಕøತ್ಯಗಳನ್ನು ತಡೆಗಟ್ಟಲು ಜಿಎಚ್‍ಎಸ್ ಕೊಡ್ಯಮೆ ಶಾಲಾ ಸಂರಕ್ಷಣಾ ಗುಂಪನ್ನು ರಚಿಸಲಾಗಿದೆ. ಶಾಲಾ ಪಿಟಿಎ ಅಧ್ಯಕ್ಷ ಅಶ್ರಫ್ ಕೊಡ್ಯಮೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಂಬಳೆ ಠಾಣಾಧಿಕಾರಿ ಎಸ್.ಆರ್.ರಜಿತ್ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಹೊರಗಿನವರು ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಹಾಗೂ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಜನಮೈತ್ರಿ ಪೋಲೀಸ್ ಅಧಿಕಾರಿ ರಜನೀತ್ ಮಾತನಾಡಿದರು. ದಿನೇಶ್ ಮಾಸ್ತರ್, ಪಿ.ಎಸ್.ಅಬ್ಬಾಸ್, ಎಂ.ಬಿ.ಅಬ್ಬಾಸ್, ಸಿ.ಎ.ನಿಜಾಮುದ್ದೀನ್, ಜಹೀರ್ ಅಬ್ಬಾಸ್, ಫೈಸಲ್ ಊಜಾರು, ಹಮೀದ್ ಛತ್ರಂಪಳ್ಳ ಮಾತನಾಡಿದರು. ಪ್ರಭಾರ ಮುಖ್ಯೋಪಾಧ್ಯಾಯ ಗಿರೀಶ್ ಮಾಸ್ತರ್ ಸ್ವಾಗತಿಸಿ, ಶಿಹಾಬ್ ವಂದಿಸಿದರು.