ಕಾಸರಗೋಡು: ಬ್ರಾಹ್ಮಣ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಎಡನೀರು ಮಠದಲ್ಲಿ ಜರಗಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘಟನೆ ಮಾಜಿ ಅಧ್ಯಕ್ಷ ಡಾ. ಬಿ. ಎಸ್ ರಾವ್ ಅವರು ಸಮ್ಮೇಳನ ಉದ್ಘಾಟಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಯು ಬಿ ಕುಣಿಕುಳ್ಳಾಯ ಅಧ್ಯಕ್ಷತೆ ವಹಿಸಿದರು. ಡಾ ಎಮ್. ಸತ್ಯನಾಥ್, ಶಂಕರನಾರಾಯಣ ಭಟ್ ತೆಕ್ಕೆಕರೆ, ಎಚ್ ಎಸ್ ಭಟ್, ಗೋವಿಂದನ್ ನಂಬೂದಿರಿ, ನಾರಾಯಣನ್ ನಂಬೂದಿರಿ, ಕೃಷ್ಣಮೂರ್ತಿ ಎಡೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಪರಮೇಶ್ವರನ್ ಎಂಬ್ರಾಂದಿರಿ ಸ್ವಾಗತಿಸಿದರು. ಬಾಳಿಕೆ ಶ್ರೀಹರಿ ಭಟ್ ವಂದಿಸಿದರು.
ಮಂಜೇಶ್ವರದಲ್ಲಿ ಆರಂಭಿಸುವ ಕಾನೂನು ಮಹಾವಿದ್ಯಾಲಯಕ್ಕೆ ಎಡನೀರು ಶ್ರೀ ಕೇಶವಾನಂದ ಭಾರತಿ ಸ್ಮಾರಕ ಕಾನೂನು ಮಹಾವಿದ್ಯಾಲಯ ಎಂದು ನಾಮಕರಣ ಮಾಡಬೇಕೆಂದು ಕೇರಳ ಸರಕಾರವನ್ನು ಆಗ್ರಹಿಸುವ ಠರಾವು ಮಂಡಿಸಲಾಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಡಿ.ಜಯನಾರಾಯಣ ತಾಯನ್ನೂರ್ ಅಧ್ಯಕ್ಷ, ಡಾ. ಎಂ ಸತ್ಯನಾಥ್ ಉಪಾಧ್ಯಕ್ಷ, ಬಾಳಿಕೆ ಶ್ರೀಹರಿ ಭಟ್ ಪ್ರಧಾನ ಕಾರ್ಯದರ್ಶಿ, ಗೋವಿಂದನ್ ನಂಬೂದಿರಿ ಜತೆ ಕಾರ್ಯದರ್ಶಿ ಹಾಗೂ ಸೂರ್ಯನಾರಾಯಣ ಭಟ್ ಬಳಾಂತೋಡು ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.