ಕಾಸರಗೋಡು : ಬಾಲಭವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಸಭೆ ಶಾಲೆಯಲ್ಲಿ ಜರುಗಿತು. ಶಿಕ್ಷಕಿ ಪ್ರಧಾಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲಾ ರಕ್ಷಕ-ಶಿಕ್ಷಕ ಸಂಘದ 2023-24ನೇ ಶೈಕ್ಷಣಿಕ ವರ್ಷಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗುರುದತ್ತ ಪೈ ಅಧ್ಯಕ್ಷ, ಮುಹಮ್ಮದ್ ಹನೀಫಾ ಉಪಾಧ್ಯಕ್ಷ, ಪ್ರಕಾಶ್ ಕೋಶಾಧಿಕಾರಿ, ವೆಂಕಟರಮಣ ಹೊಳ್ಳ ಸಲಹಾ ಸಮಿತಿ ಸದಸ್ಯ ಹಾಗೂ ಇತರ 23ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ರಾಧಾಮಣಿ ಸ್ವಾಗತಿಸಿದರು.