ತಿರುವನಂತಪುರಂ: ಎಐ ಕ್ಯಾಮೆರಾಗಳ ಮೂಲಕ ವಿಧಿಸಿರುವ ನಿಯಮಗಳ ಉಲ್ಲಂಘನೆಗಾಗಿ ಚಲನ್ ಕಳುಹಿಸುವ ವೇಗವನ್ನು ಹೆಚ್ಚಿಸುವಂತೆ ಸಾರಿಗೆ ಸಚಿವರು ಸೂಚಿಸಿದ್ದಾರೆ.
ಮೂರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ನಿನ್ನೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅನ್ಯರಾಜ್ಯಗಳಲ್ಲಿ ನೋಂದಣಿಯಾಗಿರುವ ವಾಹನಗಳು ಕಾನೂನು ಉಲ್ಲಂಘಿಸಿದರೆ ಅವುಗಳನ್ನು ಹಿಡಿಯಲು ಎಐ ಸಾಫ್ಟ್‍ವೇರ್‍ಗೆ ವಾಹನದ ಮಾಹಿತಿಯನ್ನು ಸೇರಿಸಲು ನಿರ್ಧರಿಸಲಾಯಿತು ಎಂದಿರುವರು.
ಎಐ ಕ್ಯಾಮೆರಾ ಕಳೆದ ಒಂದು ತಿಂಗಳಲ್ಲಿ 20 ಲಕ್ಷ ಕಾನೂನು ಉಲ್ಲಂಘನೆಗಳನ್ನು ಪತ್ತೆ ಮಾಡಿದೆ. ಇದರಲ್ಲಿ 7 ಲಕ್ಷ ಕಾನೂನು ಉಲ್ಲಂಘನೆಗಳನ್ನು ಪೂರ್ಣಗೊಳಿಸಬಹುದು. ಚೆಲನ್ ಕೇವಲ 1.28 ಲಕ್ಷ ಉಲ್ಲಂಘನೆ ನಡೆಸಿದವರಿಗಷ್ಟೇ ಈಗ ಕಳಿಸಲಾಗಿದೆ. ಹೀಗಿರುವಾಗ ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವ ಆಂಟನಿರಾಜು ಸಲಹೆ ನೀಡಿದ್ದಾರೆ.
ಎಲ್ಲಾ 206 ವಿಐಪಿ ವಾಹನಗಳನ್ನು ಎಐ ಕ್ಯಾಮೆರಾ ಸೆರೆಹಿಡಿದಿದೆ. ಪೋಲೀಸ್, ಕೆಎಸ್‍ಇಬಿ ಸೇರಿದಂತೆ ತುರ್ತು ಸೇವೆಯಲ್ಲಿರುವ ಸರ್ಕಾರಿ ವಾಹನಗಳ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೆಎಸ್‍ಇಬಿ ವಾಹನಕ್ಕೆ ದಂಡ ವಿಧಿಸುವ ಮೂಲಕ ಉಂಟಾದ ವಿವಾದವನ್ನು ಕೆಎಸ್‍ಇಬಿ ಮತ್ತು ಎಂವಿಡಿ ಪರಸ್ಪರ ಪರಿಹರಿಸಿದೆ ಎಂದು ಸಚಿವರು ಹೇಳಿದರು.