ಕುಂಬಳೆ: ಕೊಡಗಿನ ಗೌರಮ್ಮ ಹಾಗೂ ಹವ್ಯಕ ಮಹಾ ಮಂಡಲದ ಮಾತೃಮಂಡಳಿ ಸಹಯೋಗದಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದಲ್ಲಿ ಸಣ್ಣ ಕತಾಸ್ಪರ್ಧೆ ಆಯೋಜಿಸಲಾಗಿದೆ. ಬಹುಮಾನಗಳು ಪ್ರಶಸ್ತಿ ಪತ್ರ,ಸ್ಮರಣಿಕೆ ಜೊತೆಗೆ ನಗದು, ಪ್ರಥಮ ಬಹುಮಾನ ನಾಲ್ಕು ಸಾವಿರ ರೂ., ದ್ವಿತೀಯ ಮೂರು ಸಾವಿರ, ತೃತೀಯ ಎರಡು ಸಾವಿರ ರೂ. ನೀಡಲಾಗುವುದು. ಆಸಕ್ತರು ಸೆ. 30ರ ಮೊದಲು ಕತೆಗಳನ್ನು ಕಳುಹಿಸಿಕೊಡಬೇಕಾಗಿದೆ.
ಯಾವುದೇ ವಯೋಮಿತಿಯ ಹವ್ಯಕ ಮಹಿಳೆಯರು, ಕಾಲೇಜು, ಹೈಸ್ಕೂಲು ವಿದ್ಯಾರ್ಥಿನಿಯರು ಪಾಲ್ಗೊಳ್ಳಬಹುದು. ಯಾವುದೆ ಸೀಮೆಯ ಹವ್ಯಕ ಭಾಷೆಯಲ್ಲಿ ಬರೆಯಬಹುದು. ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶ ಇಲ್ಲ. ಈ ವರೆಗೆ ಎಲ್ಲೂ ಪ್ರಕಟವಾಗದ, ಭಾಷಾಂತರ ಅಲ್ಲದ ಸಾಮಾಜಿಕ ಕತೆಯಾಗಿರಬೇಕು. ಎಂಟು ಪುಟಕ್ಕೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ, ಟೈಪ್ ಮಾಡಿದ್ದಾದರೆ ಉತ್ತಮ. (ಸಾದಾರಣ ಎರಡು ಸಾವಿರ ಪದಗಳು) ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಕತೆಬರೆದ ಕಾಗದದಲ್ಲಿ ಹೆಸರು ವಿಳಾಸ ಇರಬಾರದು. ಅಂಚೆ ಮೂಲಕ ಕಳುಹಿಸಬೇಕು. ಇಮೇಲ್ ಅಥವಾ ಕೊರಿಯರ್ ಮುಖಾಂತರ ಕಳುಹಿಸಿದರೆ ಸ್ವೀಕೃತವಾಗದು. ಕಳುಹಿಸಬೇಕಾದ ವಿಳಾಸ ವಿಜಯಾಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನಗೌರಮ್ಮ ಕಥಾಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಅಂಚೆ ಕುಂಬಳೆ 671321, ಕಾಸರಗೋಡು ಜಿಲ್ಲೆ. ಮೊ: 8547214125, 6238537267.