ಕುಂಬಳೆ: ಕೇರಳದಲ್ಲಿ ಕಳೆದ 30 ವರ್ಷಗಳಿಂದ ಸಂಗೀತ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಮ್ಯೂಸಿಕ್ ವೇಲ್ಪೇರ್ ಅಸೋಸಿಯೇಶನ್‍ನ ಕಾಸರಗೋಡು ವಲಯ ರೂಪೀಕರಣ ಮ್ಯೂಸಿಕ್ ಫ್ಯೂಷನ್ ಸಂಗೀತ ಸಂಸ್ಥೆ ಕಾಸರಗೋಡು ಇಲ್ಲಿ ಜರಗಿತು.
ವಲಯ ಅಧ್ಯಕ್ಷರಾಗಿ ಸಾಯಿ ಮನೋಹರ್, ಉಪಾಧ್ಯಕ್ಷೆಯಾಗಿ ಚೈತ್ರ ಕುಂಬಳೆ, ಕಾರ್ಯದರ್ಶಿಯಾಗಿ ಗಣೇಶ್ ನೀರ್ಚಾಲ್, ಜೊತೆ ಕಾರ್ಯದರ್ಶಿಯಾಗಿ ಮಮತಾ ಬದಿಯಡ್ಕ, ಖಜಾಂಜಿಯಾಗಿ ರತ್ನಾಕರ ಎಸ್ ಒಡಂಗಲ್ಲು ಆಯ್ಕೆಯಾದರು. 15 ಮಂದಿಯನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶಾಜಿ ಕಾಞಂಗಾಡು, ಕಿರಣ್ ಕುಮಾರ್ ಕಾಸರಗೋಡು, ಉಮೇಶ್ ಮ್ಯೂಸಿಕ್ ಫ್ಯೂಷನ್ ಕಾಸರಗೋಡು ಉಪಸ್ಥಿತರಿದ್ದರು. ಗಣೇಶ್ ನೀರ್ಚಾಲು ಸ್ವಾಗತಿಸಿ, ಮೋಹನ್ ನೀರ್ಚಾಲು ವಂದಿಸಿದರು. ನಂತರ ಎಲ್ಲಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವು ಜರಗಿತು.