ಮಧೂರು: ಪಾರಕಟ್ಟೆ ರಂಗ ಕುಟೀರದಲ್ಲಿ ಕಲಾವಿದರ ಸಂಘಟನೆ ಸವಾಕ್ ನ ಕಾಸರಗೋಡು ಜಿಲ್ಲಾ ಸಮಿತಿಯ ಸಭೆ ನಡೆಯಿತು. ಸಾವಾಕ್ ಸಂಘಟನೆಯು ಈ ವರ್ಷ ತನ್ನ ರಜತ ಜುಬಿಲಿಯನ್ನು ಆಚರಿಸುತ್ತಿದೆ. ಇದರ ಅಂಗವಾಗಿ ವಿವಿಧ ಕಲಾ, ಸಂಸ್ಕøತಿ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಮುಂದಿನ ಡಿಸೆಂಬರ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸವಾಕ್ ಸಾಂಸ್ಕೃತಿಕ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಸವಾಕ್ ರಾಜ್ಯ ಕೋಶಾಧಿಕಾರಿಯೂ, ಜಿಲ್ಲಾ ಅಧ್ಯಕ್ಷರೂ ಆದ ಎಂ.ಉಮೇಶ್ ಸಾಲಿಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಹಾಗೂ ಸವಾಕ್ ಕೇಂದ್ರ ಸಮಿತಿ ಸದಸ್ಯೆ ಜೀನ್ ಲೆವಿನೋ ಮೊಂತೆರೊ ಉಪಸ್ಥಿತರಿದ್ದು ಅಗಲಿದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎಂ ಗಂಗಾಧರನ್ ಸ್ವಾಗತಿಸಿ ವರದಿ ಮಂಡಿಸಿದರು, ಕೋಶಾಧಿಕಾರಿ ಚಂದ್ರಹಾಸ ಕಯ್ಯಾರ್, ನರೇಂದ್ರ, ಹರಿಕಾಂತ್ ಕಾಸರಗೋಡು, ನರಸಿಂಹ ಬಲ್ಲಾಳ್, ದಯಾ ಪಿಲಿಕುಂಜೆ, ವಾಸು ಬಾಯಾರ್, ದಿವಾಕರ, ಮಧುಸೂದನ ಬಲ್ಲಾಳ್, ಅಪ್ಪ ಕುಂಞ ಮಣಿಯಾಣಿ, ಮುಂತಾದವರು ಮಾತನಾಡಿದರು. ಭಾರತಿ ಬಾಬು ವಂದಿಸಿದರು.