HEALTH TIPS

ಮಳೆಗಾಲದಲ್ಲಿ ಸೊಪ್ಪಿನ ಆಹಾರ ಅಪಾಯಕಾರಿ, ತಿನ್ನುವುದಾದರೆ ಈ ಮುನ್ನೆಚ್ಚರಿಕೆವಹಿಸಿ

 ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಸೊಪ್ಪು ತಿನ್ನವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದರಲ್ಲೂ ಸೊಪ್ಪಿನಲ್ಲೂ ಕೆಲವೊಂದು ಸೊಪ್ಪುಗಳನ್ನು ಅಂದರೆ ಕೆಸ ಈ ಬಗೆಯ ಸೊಪ್ಪು ಬಳಸಬಹುದು, ಪಾಲಾಕ್, ಅರಿವೆ ಸೊಪ್ಪು, ದಂಟಿನ ಸೊಪ್ಪು ಹಾಗೂ ಕೆಲವು ಹಸಿರು ತರಕಾರಿಗಳು ಮಳೆಗಾಲಕ್ಕೆ ಸೂಕ್ತ ಆಹಾರ ಅಲ್ವೇ ಅಲ್ಲ. ಪೋಷಕಾಂಶ, ವಿಟಮಿನ್ಸ್ ಎಲ್ಲಾ ಇರುವ ಈ ಆಹಾರಗಳು ಮಳೆಗಾಲಕ್ಕೆ ಸೂಕ್ತ ಆಹಾರವಲ್ಲ ಏಕೆ ಎಂದು ನೋಡೋಣ ಬನ್ನಿ:

ಇವುಗಳನ್ನು ಸೋಂಕು ಹೆಚ್ಚಿರುತ್ತದೆ ಮಳೆಗಾಲದಲ್ಲಿ ನೀವು ಸೊಪ್ಪಿನಲ್ಲಿ ಚಿಕ್ಕ-ಚಿಕ್ಕ ಹುಳಗಳು ಕೂಡು ಕಟ್ಟಿರುವುದನ್ನು ಗಮನಿಸಿರಬಹುದು, ಇನ್ನು ಎಲೆಗಳು ಹುಳ ತಿಂದಿರುತ್ತದೆ ಅಲ್ಲದೆ ಕೆಲವೊಂದು ಎಲೆಗಳ ಮೇಲೆ ಬಿಳಿ- ಬಿಳಿ ಕಂಡು ಬರುವುದು, ಈ ರೀತಿ ಕಂಡು ಬರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಸೊಪ್ಪಿನ ಆಹಾರ ನಮ್ಮ ಹೊಟ್ಟೆಯನ್ನು ಸೇರಿದರೆ ವಾಂತಿ, ಬೇಧಿ, ಹೊಟ್ಟೆ ನೋವು ಸಂಭವಿಸಬಹುದು. ಆದ್ದರಿಂದ ಮಳೆಗಾಲದಲ್ಲಿ ಸೊಪ್ಪಿನ ಆಹಾರ ಪದಾರ್ಥಗಳನ್ನು ದೂರವಿಡುವುದು ಒಳ್ಳೆಯದು.

ಒಂದು ವೇಳೆ ಸೊಪ್ಪು ತಿನ್ನುವುದಾದರೆ ಈ ಬಗ್ಗೆ ಜಾಗ್ರತೆವಹಿಸಿ
ನೀವು ಸೊಪ್ಪು ತಿನ್ನಲೇಬೇಡಿ ಎಂದು ಹೇಳುತ್ತಿಲ್ಲ, ಆದರೆ ಈ ಬಗ್ಗೆ ಜಾಗ್ರತೆವಹಿಸಿ. ನೀವು ಹುಳ ತಿಂದಿರುವ ಅಥವಾ ಎಲೆಗಳಲ್ಲಿ ಹುಳ ಇರುವ, ಬಿಳಿ- ಬಿಳಿ ಇರುವ ಆಹಾರವನ್ನು ಅಡುಗೆಗೆ ಬಳಸಬೇಡಿ. ಇನ್ನು ನೀವು ಸೊಪ್ಪು ಬಳಸುವಾಗ ಈ ಬಗೆಯ ಮುನ್ನೆಚ್ಚರಿಕೆವಹಿಸಿ:
* ನೀವು ಮಳೆಗಾಲದಲ್ಲಿ ಯಾರ ಬಳಿಯಿಂದ ಖರೀದಿ ಮಾಡುತ್ತೀರಿ ಎನ್ನುವುದು ಮುಖ್ಯ (ಹುಳ ತಿನ್ನಬಾರದು ಎಂದು ಕೆಲವರು ತುಂಬಾ ಕೀಟನಾಶಕ ಸಿಂಪಡಿಸುತ್ತಾರೆ, ಈ ಕುರಿತು ಕೂಡ ಜಾಗ್ರತೆವಹಿಸಬೇಕು, ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪು ಬಳಸಿ)
* ಸೊಪ್ಪನ್ನು ತಂದು ಹರಿಯುವ ನೀರಿನಲ್ಲಿ ತೊಳೆಯಿರಿ
* ಸೊಪ್ಪಿನಲ್ಲಿ ಹುಳವಿದೆಯೇ ಎಂದು ಒಂದೊಂದು ಸೊಪ್ಪನ್ನು ಬಿಡಿಸಿ ನೋಡಿ
* ನಂತರ ಸೊಪ್ಪನ್ನು ಚೆನ್ನಾಗಿ ಬೇಯಿಸಿ ತಿನ್ನಿ.

ಮಳೆಗಾಲದ ಆಹಾರ ಮಿಸ್ ಮಾಡ್ಬೇಡಿ
ಕೆಲವೊಂದು ಆಹಾರಗಳು ಮಳೆಗಾಲದಲ್ಲಿಯೇ ಸಿಗುವುದು. ಉದಾಹರಣೆಗೆ ತಜಂಕ್, ಕೆಸುವಿನ ಎಲೆ ಈ ಬಗೆಯ ಸೊಪ್ಪನ್ನು ಮಳೆಗಾಲದಲ್ಲಿ ತಿನ್ನುವುದು ತುಂಬಾ ಒಳ್ಳೆಯದು. ಇಂಥ ಆಹಾರಗಳನ್ನು ತಿನ್ನಲು ಮಿಸ್‌ ಮಾಡಿದಿರಿ ಆದರೆ ಜಾಗ್ರತೆವಹಿಸಿ ಅಷ್ಟೇ.

ಮಳೆಗಾಲದಲ್ಲಿ ಯಾವ ಬಗೆಯ ಆಹಾರ ಒಳ್ಳೆಯದು
* ಮಳೆಗಾಲದಲ್ಲಿ ನೀವು ಸೋರೆಕಾಯಿ, ಸಿಹಿ ಕುಂಬಳಾಯಿ, ಸಿಹಿ ಗೆಣಸು, ಹಾಗಾಲಕಾಯಿ ಈ ಬಗೆಯ ಆಹಾರಗಳನ್ನು ಸೇವಿಸುವುದು ಒಳ್ಳೆಯದು.
* ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ, ಸೂಪ್‌, ಲಘು ಆಹಾರ ಸೇವಿಸಿ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries