ಕಾಸರಗೋಡು: ಕಾರಡ್ಕದಲ್ಲಿ ಎಚ್.ಟಿ ವಿದ್ಯುತ್ ಲೈನ್‍ಗೆ ಬೃಹತ್ ಮರ ಉರುಳಿ ಹಾನಿಗೀಡಾಗಿದ್ದು, ಬ್ಲಾಕ್ ಪಂಚಾಯಿತಿಯ ವಿಪತ್ತು ನಿರ್ವಹಣಾ ತಂಡ ಸಮರೋಪಾದಿಯಲ್ಲಿ ತೆರವುಗೊಳಿಸಿ, ವಿದ್ಯುತ್ ಪುನರ್‍ಸ್ಥಾಪಿಸಿದೆ. ಗಾಳಿಯಿಂದ ಕೂಡಿದ ಬಿರುಸಿನ ಮಳೆಯಿಂದ ಕೊಟ್ಟಂಗುಳಿಯಲ್ಲಿ ಹೆಚ್‍ಟಿ ವಿದ್ಯುತ್ ತಂತಿಯ ಮೇಲೆ ಬೃಹತ್ ಮರ ಬಿದ್ದಿತ್ತು. ತಕ್ಷಣ ಕಾರಡ್ಕ ಬ್ಲಾಕ್ ಪಂಚಾಯಿಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿದೆ.
ಕಾರಡ್ಕ ಬ್ಲಾಕ್ ಪಂಚಾಯಿತಿ ನೇತೃತ್ವದ 42 ಮಂದಿಯ ವಿಪತ್ತು ನಿರ್ವಹಣಾ ಪಡೆ ಸಕ್ರಿಯವಾಘಿದ್ದು, ಪ್ರಥಮ ಚಿಕಿತ್ಸೆ, ವಿಪತ್ತು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ನೈಸರ್ಗಿಕ ವಿಕೋಪಗಳ ಸಂದರ್ಭ ಈ ತಂಡ ಸಂಪೂರ್ಣ ಉಚಿತವಾಗಿ ಸೇವೆ ಒದಗಿಸಲಿದ್ದು, ಕಾರಡುಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಏಳು ಪಂಚಾಯಿತಿ ವ್ಯಾಪ್ತಿಯಲ್ಲಿ ಈ ತಂಡದ ಸೇವೆ ಲಭ್ಯವಾಗಲಿದೆ. ಸೇವೆ ಆಗ್ರಹಿಸುವವರು ದೂರವಾಣಿ ಸಂಖ್ಯೆ(7012250020, 9745382755) ಹಾಗೂ ಆಂಬ್ಯುಲೆನ್ಸ್ ಸೇವೆಗೆ ದೂರವಾಣಿ ಸಂಖ್ಯೆ(9633972225)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.