HEALTH TIPS

ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಆದೇಶಗಳು ಮತ್ತು ಸುತ್ತೋಲೆಗಳು ಮಲಯಾಳಂನಲ್ಲಿ ಕಡ್ಡಾಯ: ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆ: ಅಲ್ಪಸಂಖ್ಯಾತ ಭಾಷೆಗಳ ಬಳಕೆ ಅಗತ್ಯವಿರುವಲ್ಲಿ ಬಳಸಲು ಸೂಚನೆ

             ತಿರುವನಂತಪುರಂ: ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಆದೇಶಗಳು, ಸುತ್ತೋಲೆಗಳು ಮತ್ತು ಪತ್ರವ್ಯವಹಾರಗಳು ಮಲಯಾಳಂನಲ್ಲಿರಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಅವರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

            2017 ರಲ್ಲಿ ಸಾರ್ವಜನಿಕ ಆಡಳಿತ ಇಲಾಖೆ ಹೊರಡಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

            ಸುತ್ತೋಲೆಯ ಪ್ರಕಾರ, ಇಂಗ್ಲಿμï ಮತ್ತು ರಾಜ್ಯದ ಅಲ್ಪಸಂಖ್ಯಾತ ಭಾಷೆಗಳಾದ ತಮಿಳು ಮತ್ತು ಕನ್ನಡವನ್ನು ಅಧಿಕೃತ ಭಾಷೆಯಾಗಿ ಬಳಸಲು ಅನುಮತಿಸುವ ವಿಶೇಷ ಸಂದರ್ಭಗಳಲ್ಲಿ ಹೊರತುಪಡಿಸಿ ಮಲಯಾಳಂ ಮಾತ್ರ ಬಳಸಬೇಕು. 2017ರ ಆದೇಶದಲ್ಲಿ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಷರತ್ತು ವಿಧಿಸಿದೆ. ಆದರೆ ಸಚಿವ ಸಂಪುಟ ಸಭೆಯ ನಿರ್ಧಾರಗಳನ್ನಾಧರಿಸಿ ಹೊರಡಿಸಿರುವ ಆದೇಶದಲ್ಲೂ ಹಲವು ಇಲಾಖೆಗಳು ಮಲಯಾಳಂ ಬಳಸುತ್ತಿಲ್ಲ ಎಂದು ಸುತ್ತೋಲೆಯಲ್ಲಿ ಗಮನಸೆಳೆದಿದೆ.

             ಇದು ಸರ್ಕಾರದ ಘೋಷಿತ ನಿಲುವಿಗೆ ವಿರುದ್ಧವಾಗಿದೆ. ಹಣಕಾಸು ಮತ್ತು ಕಾನೂನು ಇಲಾಖೆಗಳು ಸೇರಿದಂತೆ ಎಲ್ಲಾ ಆದೇಶಗಳು ಮಲಯಾಳಂನಲ್ಲಿರಬೇಕು. ಇದನ್ನು ಖಾತ್ರಿ ಪಡಿಸುವ ಜವಾಬ್ದಾರಿ ಇಲಾಖಾ ಕಾರ್ಯದರ್ಶಿಗಳ ಮೇಲಿದೆ. ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿಟ್ಟಿನಲ್ಲಿ ಪ್ರಗತಿಯನ್ನು ಮೌಲ್ಯಮಾಪನ ಮಾಡಲಾಗುವುದು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries