ಬದಿಯಡ್ಕ : ಭಾರತವು ಚಂದ್ರಯಾನ್ 3 ಭಾಗವಾಗಿ ಚಂದ್ರನಲ್ಲಿಳಿಸುವ ಲ್ಯಾಂಡರ್ ರೋವರ್ ನ ಮಾದರಿ ಶಾಲಾ ಅಸೆಂಬ್ಲಿ ಸಮಯ ಪ್ರತ್ಯಕ್ಷವಾಗಿ ಮಕ್ಕಳಲ್ಲಿ ಕೌತುಕ ಮೂಡಿಸಿತು.
ಚಾಂದ್ರ ದಿನಾಚರಣೆಯ ಅಂಗವಾಗಿ ಪೆರಡಾಲ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾದ ಸಮಾರಂಭದಲ್ಲಿ ಚಂದ್ರನಲ್ಲಿ ಮೊದಲು ಹೆಜ್ಜೆ ಗುರುತು ಮೂಡಿಸಿದ ನೀಲ್ ಆರ್ಮ್ ಸ್ಟ್ರಾಂಗ್, ಆಲ್ಡ್ರಿನ್, ಕಾಲಿನ್ಸ್ ವೇಷಧಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ರಾಕೆಟ್ ಉಡ್ಡಯನ ಮಾದರಿ ಪ್ರದರ್ಶನ ಮಾಡಲಾಯಿತು. ಚಂದ್ರನ ಕುರಿತು ಹಾಡು,ಭಾಷಣ, ರಸಪ್ರಶ್ನೆ, ಚಾರ್ಟ್ ಪ್ರದರ್ಶನ ಮುಂತಾದ ವೈವಿಧ್ಯಮಯ ಚಟುವಟಿಕೆಗಳು ನಡೆದವು. ಮುಖ್ಯ ಶಿಕ್ಷಕ ಶಂಕರ ನಾರಾಯಣ ಪ್ರಕಾಶ ಶುಭ ಕೋರಿದರು.ಶ್ರೀಧರನ್,ರಿಶಾದ್, ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಡೆಸಿಕೊಟ್ಟು ಚಂದ್ರಯಾನ್ 3 ಯಶಸ್ವಿಯಾಗಿ ಚಂದ್ರನನ್ನು ತಲುಪಲಿ ಎಂದು ಹಾರೈಸಿದರು. ಲಾವಣ್ಯ, ಧೃತನ್, ಅನ್ವಿತ ಮೊದಲಾದ ಮಕ್ಕಳು ನೇತೃತ್ವ ನೀಡಿದರು. ವಿಜ್ಞಾನ ಕ್ಲಬ್ ನ ಸಿಜಿ ಥಾಮಸ್ ಕಾರ್ಯಕ್ರಮ ಸಂಯೋಜಿಸಿದರು.