ಕಾಸರಗೋಡು: ರಾಜ್ಯ ಪರಿಶಿಷ್ಟ ಜಾತಿ-ಪ. ಪಂಗಡ ಅಭಿವೃದ್ಧಿ, ಮುಜರಾಯಿ-ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೆ.ರಾಧಾಕೃಷ್ಣನ್ ಜುಲೈ 31ರಂದು ಕಾಸರಗೋಡು ಭೇಟಿ ನೀಡಲಿದ್ದು, ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 10ಕ್ಕೆ ಇಳಂಬಚ್ಚಿಯಲ್ಲಿ ಶಾಲಾ ನೂತನ ಕಟ್ಟಡ ಉದ್ಘಾಟ£ , 11.30ಕ್ಕೆ ಪುಲ್ಲೂರು, 12.30ಕ್ಕೆ ಕೇರಳ ರಾಜ್ಯ ಹಿಂದುಳಿದ ವಿಭಾಗದ ನಿಗಮದ ಸಾಲ ಮೇಳ ಉದ್ಘಾಟನೆ, ಮಧ್ಯಾಹ್ನ 2.30ಕ್ಕೆಕುತ್ತಿಕ್ಕೋಲ್, 3ಕ್ಕೆ ಬೇಡಡ್ಕದ ವಸತಿ ಶಾಲಾ ಕಟ್ಟಡದ ಶಿಲಾನ್ಯಾಸ, ಸಂಜೆ 4.30ಕ್ಕೆ ಎಣ್ಮಕಜೆ ಪಂಚಾಯಿತಿಯ ಪೆರ್ಲ ಸನಿಹದ ಕಾನ ಪ್ರದೇಶದಲ್ಲಿನ ಬಡ್ಸ್ ಶಾಲಾ ನೂತನ ಕಟ್ಟಡದ ಉದ್ಘಾಟನೆ ನಡೆಯಲಿರುವುದು.