ನವದೆಹಲಿ: ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಲಿದೆ. ಸಿನಿಮಾ ಥಿಯೇಟರ್‍ಗಳಲ್ಲಿ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‍ಟಿ ದರವನ್ನು 18% ರಿಂದ 5% ಕ್ಕೆ ಇಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೆಹಲಿಯಲ್ಲಿ ನಡೆದ 50ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ರೆಸ್ಟೊರೆಂಟ್ ಗಳಲ್ಲಿ ಸಿಗುವ ದರದಲ್ಲೇ ಥಿಯೇಟರ್ ಗಳಲ್ಲಿಯೂ ಆಹಾರ ದೊರೆಯಲಿದೆ. ಇದಲ್ಲದೇ ಆನ್ ಲೈನ್ ಗೇಮ್ ಗಳಿಗೆ ಜಿಎಸ್ ಟಿ ವಿಧಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಆನ್‍ಲೈನ್ ಗೇಮಿಂಗ್, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳು ಈಗ ಜಿಎಸ್‍ಟಿಗೆ ಒಳಪಟ್ಟಿರುತ್ತವೆ. ಇನ್ನು ಮುಂದೆ ಇವುಗಳ ಮೇಲೆ ಶೇ 28ರಷ್ಟು ಜಿಎಸ್‍ಟಿ ವಿಧಿಸಲಾಗುವುದು.
ಅಲ್ಲದೆ, ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಔಷಧಿಗಳ ಬೆಲೆ ಕಡಿಮೆಯಾಗುತ್ತದೆ. ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ಆಹಾರ (ಎಫ್‍ಎಸ್‍ಎಂಪಿ) ಆಮದನ್ನು ಜಿಎಸ್‍ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸಭೆ ತಿಳಿಸಿದೆ. ಬಹು ಬಳಕೆಯ ವಾಹನಗಳ ಮೇಲೆ ಶೇ.22ರಷ್ಟು ಸೆಸ್ ವಿಧಿಸಲಾಗಿದೆ. ಆದರೆ ಇದರಲ್ಲಿ ಸೆಡಾನ್‍ಗಳನ್ನು ಸೇರಿಸಲಾಗಿಲ್ಲ. ಖಾಸಗಿ ನಿರ್ವಾಹಕರು ಒದಗಿಸುವ ಉಪಗ್ರಹ ಉಡಾವಣಾ ಸೇವೆಗಳನ್ನು ಸಹ ಉSಖಿ ಯಿಂದ ವಿನಾಯಿತಿ ನೀಡಲಾಗಿದೆ. ಇದಲ್ಲದೇ ಜಿಎಸ್‍ಟಿ ನೋಂದಣಿಗೆ ವೈಯಕ್ತಿಕ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಎಸ್‍ಟಿ ಕೌನ್ಸಿಲ್ ಮಾಹಿತಿ ನೀಡಿದೆ.
ಹಂತ ಹಂತವಾಗಿ ಜಿಎಸ್‍ಟಿ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ನ್ಯಾಯಮಂಡಳಿಯಲ್ಲಿ ನ್ಯಾಯಾಂಗ ತಜ್ಞರು ಮತ್ತು ತಾಂತ್ರಿಕ ತಜ್ಞರು ಇರುತ್ತಾರೆ. ರಾಜಧಾನಿ ನಗರಗಳು ಮತ್ತು ಹೈಕೋರ್ಟ್ ಪೀಠಗಳು ಇರುವ ಸ್ಥಳಗಳಲ್ಲಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುವುದು. ಕೇರಳದ ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಜಿಎಸ್‍ಟಿ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುವುದು.