ಕಾಸರಗೋಡು: ಜಿಲ್ಲೆಯ ಕಾರಡ್ಕ ಬ್ಲಾಕ್‍ನಲ್ಲಿ ಎಸ್.ವಿ.ಇ.ಪಿ ಯೋಜನೆಗಾಗಿ ಮೈಕ್ರೋ ಎಂಟರ್‍ಪ್ರೈಸ್ ಕನ್ಸಲ್ಟೆಂಟ್ (ಎಂ.ಇ.ಸಿ) ಖಾಲಿ ಹುದ್ದೆಗಳ ಭರ್ತಿಗೊಳಿಸುವ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ವ್ಯಾಪ್ತಿಯ ಪ್ರದೇಶದಲ್ಲಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಟುಂಬಶ್ರೀ ಸದಸ್ಯರು, ಮಹಿಳೆಯರು ಮತ್ತು ಓಕ್ಸಿಲರಿ ಸದಸ್ಯರಿಗೆ ಆದ್ಯತೆ ಕಲ್ಪಿಸಲಾಗಿದ್ದು, ಗೌರವಧನದ ಆಧಾರದ ಮೇಲೆ ಸಂಭಾವನೆ ನೀಡಲಾಗುವುದು. ಅರ್ಹತೆ ಪ್ರಾಥಮಿಕ ಕಂಪ್ಯೂಟರ್ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿದ್ದು, ವಯಸ್ಸಿನ ಮಿತಿ 25ರಿಂದ 45 ವಷ9ದೊಳಗಿರಬೇಕು. ಅಭ್ಯರ್ಥಿಗಳು ಬಯೋ ಡಾಟಾ, ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವದ ಸರ್ಟಿಫಿಕೇಟ್ ಮುಂತಾದವುಗಳನ್ನು ಅರ್ಜಿಯೊಂದಿಗೆ ಆಗಸ್ಟ್ 4 ರ ಮೊದಲು ಕಾಸರಗೋಡು ಸಿವಿಲ್ ಸ್ಟೇಷನ್, ವಿದ್ಯಾನಗರ ಪಿ.ಒ, ಕಾಸರಗೋಡು-671123 ಎಂಬ ವಿಳಾಸದಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಗೆ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256111, 8547224811)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.