ಕೊಟ್ಟಾಯಂ: ರಾಜ್ಯಾದ್ಯಂತ ಹೆಚ್ಚಿನ ಪ್ರದೇಶಗಳಲ್ಲೂ ನಕಲಿ ಬಾಳೆ ಕಂದುಗಳನ್ನು ವ್ಯಾಪಕವಾಗಿ ಮಾರಾಟವಾಗುತ್ತಿವೆ ಎಂಬ ದೂರು ಕೇಳಿಬರುತ್ತಿದೆ. ರೈತರು ತಾವು ಖರೀದಿಸುವ ಕಂದುಗಳು ಅಸಲಿ;ನಕಲಿ ಎಂದು ತಿಳಿಯದೆ ಕೃಷಿಗಿಳಿಯುತ್ತಾರೆ. ಆದರೆ ಬಾಳೆಗೊನೆ ಹಾಕಿದ ಬಳಿಕವಷ್ಟೇ ರೈತರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ.
ಕಳಪೆ ಗುಣಮಟ್ಟದ ಕಂದುಗಳನ್ನೇ ಮಾರುಕಟ್ಟೆಗೆ ಬಳಸಲಾಗುತ್ತಿದೆ. ರೈತರು ಕಂದುಗಳು ಉತ್ತಮ ಗುಣಮಟ್ಟದ ಅಥವಾ ನಕಲಿ ಎಂದು ಗುರುತಿಸಲು ಯಾವುದೇ ವ್ಯವಸ್ಥೆಗಳಿಲ್ಲದೆ 3540 ರೂ.ವರೆಗೂ ಬೆಲೆ ನೀಡಿ ಖರೀದಿಸುತ್ತಾರೆ. ತಮಿಳುನಾಡಿನ ರೈತರಿಗೆ ಉತ್ತಮ ಕಂದುಗಳನ್ನು ನೀಡಲಾಗುತ್ತಿದ್ದು, ಕೇರಳಕ್ಕೆ ಕಳಪೆ ಗುಣಮಟ್ಟದ ಕಂದುಗಳನ್ನು ಬಳಸಲಾಗುತ್ತಿದೆ ಎಂದು ರೈತರು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ನಕಲಿ ಕಂದುಗಳನ್ನು ನೀಡಿ ರೈತರಿಗೆ ವಂಚನೆ ಮಾಡಲಾಗುತ್ತಿದೆ.ಹೆಚ್ಚು ಸಾಗುವಳಿ ಇರುವ ನೇಂದ್ರ, ಮೈಸೂರು, ರಸಬಾಳೆ ಸಹಿತ ಕೆಲವು ತಳಿಯಲ್ಲಿ ಈ ರೀತಿಯ ವಂಚನೆ ಹೆಚ್ಚಾಗಿ ನಡೆಯುತ್ತಿದೆ.
ಇಂತಿಂತಹ ಬಾಳೆ ತಳಿಗಳು ಬೇಗನೆ ಗೊನೆ ಬಿಡುತ್ತದೆ ಎಂದು ಹೇಳಿ ಕಂದುಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಗೊನೆಗಳು ಹುಟ್ಟಿಕೊಳ್ಳುವಾಗ ಬಾಳೆಯಲ್ಲಿ ಒಂದೆರಡು ಗೊಂಚಲು(ಪಾಡ) ಮಾತ್ರ ಇರುತ್ತದೆ. ಇದರಿಂದ ರೈತರಿಗೆ ಅಪಾರ ನಷ್ಟವಾಗುತ್ತಿದೆ. ಮೋಸ ಹೋಗುವುದು ಸಾಮಾನ್ಯವಾಗಿರುವುದರಿಂದ ಅನೇಕ ರೈತರು ಕೃಷಿ ಕೈಬಿಡುವ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತರು.
ರೈತರಿಗೆ ಗುಣಮಟ್ಟದ ಕಂದುಗಳನ್ನು ಪೂರೈಸಲು ತೋಟದ ಮನೆಗಳು ಸಿದ್ಧವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ತರಕಾರಿ ಮತ್ತು ಹಣ್ಣು ಉತ್ತೇಜನಾ ಮಂಡಳಿಯ ಮೂಲಕ ಮಾರುಕಟ್ಟೆಯಲ್ಲಿ ಗುಣಮಟ್ಟದ ಕಂದುಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಬಾಳೆ ಕಂದು ಪೂರೈಸುವ ನರ್ಸರಿಗಳಲ್ಲಿ ತಪಾಸಣೆ ಬಲಪಡಿಸುವ ಮೂಲಕ ನಕಲಿ ಕಂದು ಮಾರಾಟ ತಡೆಯಬಹುದು.