ನವದೆಹಲಿ: ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆ ನಿಯಂತ್ರಿಸುವ ಅಧಿಕಾರವನ್ನು ಕೇಂದ್ರ ಇಲ್ಲವೇ ರಾಜ್ಯಗಳ ಪ್ರಾಧಿಕಾರಕ್ಕೆ ವಹಿಸಬೇಕು ಎಂಬ ಪ್ರಸ್ತಾವವನ್ನು ಆರೋಗ್ಯ ಸಚಿವಾಲಯ ಮುಂದಿಟ್ಟಿದೆ.
ನವದೆಹಲಿ: ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆ ನಿಯಂತ್ರಿಸುವ ಅಧಿಕಾರವನ್ನು ಕೇಂದ್ರ ಇಲ್ಲವೇ ರಾಜ್ಯಗಳ ಪ್ರಾಧಿಕಾರಕ್ಕೆ ವಹಿಸಬೇಕು ಎಂಬ ಪ್ರಸ್ತಾವವನ್ನು ಆರೋಗ್ಯ ಸಚಿವಾಲಯ ಮುಂದಿಟ್ಟಿದೆ.
ಸಚಿವಾಲಯವು ಈ ವಿಷಯಕ್ಕೆ ಸಂಬಂಧಿಸಿ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಬೇಕಿದೆ.
ಕೇಂದ್ರೀಯ ಔಷಧಗಳ ಪ್ರಮಾಣಕ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮೂಲಕವೇ ನಿಯಂತ್ರಿಸಬೇಕು ಎಂದು ಈ ಮೊದಲಿನ ಪ್ರಸ್ತಾವವನ್ನು ಸಚಿವಾಲಯ ಈಗ ಬದಲಿಸಿದೆ.
ಈಗಿರುವ ವ್ಯವಸ್ಥೆಯಂತೆ, ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ರಾಜ್ಯ ಸರ್ಕಾರಗಳ ಅಧೀನದ ಔಷಧ ನಿಯಂತ್ರಕ ಸಂಸ್ಥೆಗಳ ಮೂಲಕವೇ ನಿಯಂತ್ರಿಸಲಾಗುತ್ತಿದೆ.
ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿ, ಆನ್‌ಲೈನ್ ಮೂಲಕ ಔಷಧಗಳ ಮಾರಾಟ/ವಿತರಣೆಯ ನಿಯಂತ್ರಣ, ನಿರ್ಬಂಧ ಅಥವಾ ನಿಷೇಧ ಮಾಡಬಹುದು ಎಂದು 'ಹೊಸ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕ ಮಸೂದೆ,2023' ಕರಡಿನಲ್ಲಿ ಹೇಳಲಾಗಿದೆ.