ಶ್ರೀನಗರ: ಹವಾಮಾನ ವೈಪರೀತ್ಯ ಹಾಗೂ ಭಾರಿ ಮಳೆಯಿಂದಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಹವಾಮಾನ ವೈಪರೀತ್ಯ ಹಾಗೂ ಭಾರಿ ಮಳೆಯಿಂದಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್‌ತಾಲ್ ಹಾಗೂ ಪಾಲ್ಗಾಂ ಎರಡೂ ಮಾರ್ಗಗಳಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
'ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಇಂದು ಬೆಳಿಗ್ಗಿನಿಂದ ಅಮರನಾಥ ದೇಗುಲಕ್ಕೆ ಹೋಗಲು ಯಾವ ಯಾತ್ರಿಗೂ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.
ದೇಗುಲಕ್ಕೆ ಹೋಗಲು ಅಣಿಯಾಗಿದ್ದ ಭಕ್ತರು ಬಲ್‌ತಾಲ್ ಹಾಗೂ ನುನ್‌ವಾನ್ ಬೇಸ್ ಕ್ಯಾಂಪ್‌ನಲ್ಲಿ ಬಾಕಿಯಾಗಿದ್ದಾರೆ. ಹವಾಮಾನ ಸರಿಯಾದರೆ, ಯಾತ್ರೆ ಪುನಾರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.