ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ತೃತೀಯ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ, ಶ್ರೀಮಠದಲ್ಲಿ ನಡೆದ ಶ್ರೀಲಕ್ಷ್ಮೀ ದೇವಮಣಿ ಅವರ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಕಲ್ಯಾಣಿ ರಾಗದ ವರ್ಣದಿಂದ ಪ್ರಾರಂಭಗೊಂಡು ನಾಟರಾಗದ ಜಯ ಜಯ ಸ್ವಾಮಿನ್, ರೇವಗುಪ್ತಿರಾಗದ ಗೋಪಾಲಕ ಪಾಹಿಮಾನ್, ಸಾಮಾರಾಗದ ಅನ್ನಪೂರ್ಣೆ ವಿಶಾಲಾಕ್ಷಿ, ಗಾನಮೂರ್ತಿ ರಾಗದ ಗಾನಮೂರ್ತೆ, ಕಾಪಿ ರಾಗದ ಎನ್ನತಮಮ್ ಸೈದನೆ ಕೃತಿಗಳನ್ನು ಯುವ ಕಲಾವಿದೆ ಸುಮಧುರವಾಗಿ ಹಾಡಿದರು. ಪಕ್ಕವಾದ್ಯದಲ್ಲಿ ವಯಲಿನ್‍ನಲ್ಲಿ ವಿದ್ವಾನ್ ವೇಣುಗೋಪಾಲ ಶ್ಯಾನುಭಾಗ್, ಮೃದಂಗದಲ್ಲಿವಿದ್ವಾನ್ ವಸಂತ ಕೃಷ್ಣ ಕಾಂಚನ ಸಾಥ್ ನೀಡಿದರು.