ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಶ್ರೀ ಮಠಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು.
ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ರಾಮ್ ಪ್ರಸಾದ್, ಕಾಸರಗೋಡು ಘಟಕ ಅಧ್ಯಕ್ಷ ಕೆ ವೆಂಕಟರಮಣ ಹೊಳ್ಳ ಉಪಾಧ್ಯಕ್ಷ ನಿರಂಜನ ಕೊರಕ್ಕೋಡು, ಹರಿದಾಸ ದಯಾನಂದ ಕುಮಾರ್ ಹೊಸದುರ್ಗ, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಪ್ರದೀಪ್ ಬೇಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ ಕೂಡ್ಲು, ಶಿವರಾಮ ಕಾಸರಗೋಡು, ಗುರುಪ್ರಸಾದ್ ಕೋಟೆ ಕಣಿ, ಲಕ್ಷ್ಮೀನಾರಾಯಣ ಪಟ್ಟೇರಿ ಕಾವು ಮಠ, ಕೆ ಎನ್ ರಾಮಕೃಷ್ಣ ಹೊಳ್ಳ, ಶ್ರೀಮತಿ ಸುಚಿತ್ರ ಮಹೇಶ್, ಶ್ರೀಕಾಂತ ಕಾಸರಗೋಡು, ದಯಾನಂದ ಕೊಳಕೆಬೈಲ್ ಮುಂತಾದವರು ಉಪಸ್ಥಿತರಿದ್ದರು.
ಕಾಸರಗೋಡು ಪೇಟೆ ವೆಂಕಟ್ರಮಣ ದೇವಸ್ಥಾನದಿಂದ ಹೊರಟ ಹೊರ ಕಾಣಿಕೆ ಮೆರವಣಿಗೆ ಎಡನೀರು ಮಠದಲ್ಲಿ ಚಾತುರ್ಮಾಸ ಸಮಿತಿಯ ಪದಾಧಿಕಾರಿಗಳು ಆದರದಿಂದ ಬರಮಾಡಿಕೊಳ್ಳಲಾಯಿತು ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನದೊಂದಿಗೆ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಇದರ ಅಂಗವಾಗಿ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ, ಹರಿದಾಸ ದಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥೆ ಸತ್ಸಂಗ ನಡೆಯಿತು.