ತಿರುವನಂತಪುರಂ: ಕಾಳಸಂತೆ ಮತ್ತು ಕಾಳಧನವನ್ನು ತಡೆಯಲು ರಾಜ್ಯ ಪೋಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ಅವರು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.
ಕಾಳಸಂತೆ ಹಾಗೂ ಕಾಳಧನ ತಡೆಯಲು ವಿವಿಧ ಇಲಾಖೆಗಳ ತಪಾಸಣೆ ವೇಳೆ ಪೋಲೀಸ್ ರಕ್ಷಣೆ ಹಾಗೂ ನೆರವು ನೀಡುವಂತೆಯೂ ಸೂಚಿಸಲಾಗಿದೆ. ಬೆಲೆ ಏರಿಕೆ ತಡೆಯುವ ಚಟುವಟಿಕೆಗಳ ಭಾಗವಾಗಿ ಸಮಯಕ್ಕೆ ಸರಿಯಾಗಿ ಮತ್ತು ನಿಖರವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೋಲೀಸ್ ಮುಖ್ಯಸ್ಥರು ಸೂಚಿಸಿದ್ದಾರೆ.
ಬೆಲೆ ಏರಿಕೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ಕರೆದಿದ್ದ ಸಭೆಯ ನಿರ್ಧಾರಗಳ ಆಧಾರದ ಮೇಲೆ ರಾಜ್ಯ ಪೆÇಲೀಸ್ ಮುಖ್ಯಸ್ಥ ಡಾ.ಶೇಖ್ ದರ್ವೇಶ್ ಸಾಹಿಬ್ ಸೂಚನೆಗಳನ್ನು ನೀಡಿದ್ದಾರೆ.