ಬದಿಯಡ್ಕ: ಎಡನೀರು ಶ್ರೀ ಮಠದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಶಂಕರಾಚಾರ್ಯರ ಪ್ರತಿಮೆ ಹಾಗೂ ಮಂದಿರಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಪಾದುಕಾನ್ಯಾಸ ನೆರವೇರಿಸಿದರು. ತೃತೀಯ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಶುಕ್ರವಾರ ಶ್ರೀಮಠದ ಆವರಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂತ್ರಾಕ್ಷತೆಯನ್ನಿತ್ತು ಮುಂದಿನ ಕಾರ್ಯಗಳಿಗೆ ಚಾಲನೆಯನ್ನು ನೀಡಿ ಅನುಗ್ರಹಿಸಿದರು. ಶ್ರೀ ಮಠದ ಶಿಷ್ಯಭಕ್ತರು ಈ ಸಂದಭರ್Àದಲ್ಲಿ ಉಪಸ್ಥಿತರಿದ್ದರು.