ಐ ಫ್ಲೂ ಅಂದರೆ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಆದ್ದರಿಂದ ಈ ಸಮಯದಲ್ಲಿ ಪೋಷಕರು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ. ದೆಹಲಿಯಲ್ಲಿ ದಿನದಲ್ಲಿ 100ಕ್ಕೂ ಅಧಿಕ ರೋಗಿಗಳು ಈ ಐ ಫ್ಲೂನಿಂದಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಹೆದಲಿಯ ವೈದ್ಯರು ಹೇಳುತ್ತಿದ್ದಾರೆ.
ಐ ಫ್ಲೂ ಸಮಸ್ಯೆ ತುಂಬಾನೇ ಹೆಚ್ಚಾಗುತ್ತಿದ್ದು ತುಂಬಾ ರೋಗಿಗಳಲ್ಲಿ ಕಣ್ಣಿನಲ್ಲಿ ಊತ, ನೀವು ಕಂಡು ಬರುತ್ತಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ conjunctiva ಎಂದು ಕರೆಯಲಾಗುವುದು. ಐ ಫ್ಲೂ ಉಂಟಾದಾಗ ಕಣ್ಣುಗಳು ಕೆಂಪಾಗಿ, ಕಣ್ಣುಗಳಲ್ಲಿ ಊತ ನೋವು ಕಂಡು ಬರುವುದು.ಐ ಫ್ಲೂ ಲಕ್ಷಣಗಳೇನು? ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದೇ? ಮುಂತಾದ ಮಾಹಿತಿ ತಿಳಿಯೋಣ ಬನ್ನಿ:
ಐ ಫ್ಲೂಗೆ ಕಾರಣವೇನು?
* ವೈರಸ್
* ಬ್ಯಾಕ್ಟಿರಿಯಾ
* ಅಲರ್ಜಿ
* ರಾಸಾಯನಿಕಗಳು
* ಕಾಂಟ್ಯಾಕ್ಟ್ ಲೆನ್ಸ್
* ವಾಯು ಮಾಲಿನ್ಯ
*ಫಂಗಿ
ಐ ಫ್ಲೂ ಲಕ್ಷಣಗಳೇನು?
* ಕಣ್ಣು ಕೆಂಪು ಅಥವಾ ಪಿಂಕ್ ಬಣ್ಣಕ್ಕೆ ತಿರುಗುವುದು
* ಕಣ್ಣುಗಳಲ್ಲಿ ಊತ
* ಕಣ್ಣಿನಲ್ಲಿ ನೀರು ಬರುವುದು
* ಕಣ್ಣು ಉಜ್ಜಬೇಕೆನಿಸುವುದು
* ತುರಿಕೆ, ಉರಿ ಒಂಥರಾ ಕಿರಿಕಿರಿ ಅನಿಸುವುದು
* ಕಣ್ಣಿನಿಂದ ಬಿಳಿ ಪೊರೆ ಬರುವುದು
* ಕಾಂಟ್ಯಾಕ್ಟ್ ಲೆನ್ಸ್ ಹಾಕಿದಾಗ ತೊಂದರೆಯಾಗುವುದು
ಐ ಫ್ಲೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದೇ?
* ಐ ಪ್ಲೂ ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದರಿಂದ ತುಂಬಾನೇ ಎಚ್ಚರಿಕೆವಹಿಸಬೇಕು.
* ಶಾಲೆಗೆ ಹೋಗುವ ಮಕ್ಕಳಾದರೆ ಅವರು ಗುಂಪಿನಲ್ಲಿ ಆಡುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುತ್ತದೆ.
* ಅಲ್ಲದೆ ಮಕ್ಕಳಲ್ಲಿ ಇದರ ಬಗ್ಗೆ ಜಾಗ್ರತೆ ಮೂಡಿಸುವುದು ಕಷ್ಟ, ಜೊತೆಗೆ ಆಡಬೇಡಿ ಎಂದರೂ ಅವರು ಕೇಳುವುದಿಲ್ಲ, ಈ ಕಾರಣಕ್ಕೆ ಬೇಗನೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
* ಅಲ್ಲದೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ, ಈ ಕಾರಣದಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
ಐ ಫ್ಲೂಗೆ ಚಿಕಿತ್ಸೆ ಹೇಗೆ?
ವೈದ್ಯರು ನಿಮಗೆ ಐ ಡ್ರಾಪ್ ಅಥವಾ ಆಂಟಿಬಯೋಟಿಕ್ , ಲ್ಯೂಬ್ರಿಕಾಂಟ್ ನೀಡಬಹುದು. ಐ ಫ್ಲೂ ಇರುವವರು ಕಣ್ಣುಗಳನ್ನು ಪದೇ ಪದೇ ಮುಟ್ಟಲು ಹೋಗಬಾರದು, ಅಲ್ಲದೆ ಕೈಗಳನ್ನು ಆಗಾಗ ತೊಳೆಯಬೇಕು. ಅಲ್ಲದೆ ಐ ಫ್ಲೂ ಇರುವವರು ಮನೆಯಲ್ಲಿಯೇ ಇದ್ದು ಗುಣವಾದ ಮೇಲೆ ಹೊರಗಡೆ ಓಡಾಡಿ, ಇಲ್ಲದಿದ್ದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು.
ಐ ಫ್ಲೂ ಉಂಟಾದಾಗ 7-14 ದಿನಗಳಲ್ಲಿ ಕಡಿಮೆಯಾಗುವುದು, ಕೆಲವರಿಗೆ 3 ವಾರಗಳು ಬೇಕಾಗುವುದು.