ಬದಿಯಡ್ಕ: ವೈದ್ಯರ ದಿನಾಚರಣೆಯ ಅಂಗವಾಗಿ ಮಾನ್ಯದಲ್ಲಿ ಪ್ರಸಿದ್ಧ ಹಿರಿಯ ವೈದ್ಯ ಡಾ. ಕೆ. ಶ್ಯಾಮ ಸುಂದರ ಅವರನ್ನು ನಾಗರಿಕರು ಸನ್ಮಾನಿಸಿದರು.
ಪ್ರೊ.ಎ. ಶ್ರೀನಾಥ್ ಕೊಲ್ಲಂಗಾನ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಮೂಸಾ ಬಿ. ಚೆರ್ಕಳ ಉದ್ಘಾಟಿಸಿದರು. ಸನ್ಮಾನವನ್ನು ಸ್ವೀಕರಿ ಡಾ. ಶ್ಯಾಮ ಸುಂದರ ಅವರು ಮಾತನಾಡಿ 35 ವರ್ಷಗಳ ಕಾಲ ಮಾನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಈ ಸನ್ಮಾನವು ಮಾನ್ಯದ ಜನತೆಯ ಪ್ರೀತಿಯ ಸಂಕೇತವಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಎಂ.ಎಚ್. ಜನಾರ್ಧನ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಧುಚಂದ್ರ ಮಾನ್ಯ, ಲಕ್ಷ್ಮೀ ಶೆಟ್ಟಿ ಮಾನ್ಯ, ಸನಿಲ್ ಮಾನ್ಯ, ನಾರಾಯಣ ನಾಯ್ಕ ಕಾರ್ಮಾರು, ಜ್ಯೋತಿಷಿ ಶ್ರೀಕೃಷ್ಣ ಭಟ್ ಕಾರ್ಮಾರು, ದಯಾಸಾಗರ ಮಾನ್ಯ ಜೊತೆಗಿದ್ದರು. ಖಾದರ್ ಮಾನ್ಯ ವಂದಿಸಿದರು.