ಹರಿದ್ವಾರ: ವದಂತಿಯನ್ನು ನಿಜವೆಂದು ನಂಬಿ ಪ್ರಯಾಣಿಕರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಸೇತುವೆಯಿಂದ ನೀರಿಗೆ ಜಿಗಿದ ವಿಚಿತ್ರ ಘಟನೆ ಉತ್ತರಖಂಡದ ಹರಿದ್ವಾರದ ಬಳಿ ನಡೆದಿದೆ.
ಭಾನುವಾರದಂದು ಲಕ್ಸರ್ ಪ್ರದೇಶದ ನಿಲ್ದಾಣದ ಬಳಿ ಲಕ್ನೋ-ಚಂಡೀಗಢ ಸದ್ಭಾವನಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಭೀತಿಯನ್ನು ಸೃಷ್ಟಿಸಿದ್ದು, ಕೂಡಲೇ ರೈಲು ಬಂಗಂಗಾ ನದಿಯ ಮೇಲಿನ ರೈಲ್ವೆ ಸೇತುವೆಯ ಮೇಲೆ ಸ್ವಲ್ಪ ಸಮಯದ ನಂತರ ನಿಂತಿದೆ. ಗಾಬರಿಗೊಂಡ ಪ್ರಯಾಣಿಕರು ನೀರಿಗೆ ಜಿಗಿದಿದ್ದು ಕೆಲವರು ಈಜಿ ದಡ ಸೇರಿದ್ದಾರೆ. ಇನ್ನು ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇತುವೆ ಅಂಚಿ ಕಾಲ್ನಡಿಗೆಯಲ್ಲಿ ಸಾಗಿ ದಂಡೆಯನ್ನು ಸೇರಿದ್ದಾರೆ.
ಈ ಕುರಿತು ಲಕ್ಸರ್ ಸ್ಟೇಷನ್ ಸೂಪರಿಂಟೆಂಡೆಂಟ್ ಎಸ್.ಕೆ. ತಿವಾರಿ ಮಾತನಾಡಿದ್ದು, ಯಾರೋ ಕಿಡಿಗೇಡಿಗಳು ರೈಲಿನಲ್ಲಿ ಸರಪಳಿಯನ್ನು ಎಳೆದಿದ್ದಾರೆ. ಅದರ ಪರಿಣಾಮವಾಗಿ ಚಕ್ರಗಳು ಜ್ಯಾಮ್ ಆಗಿ ಹೊಗೆಯನ್ನು ಹೊರಸೂಸಿದ್ದು, ಈ ಘಟನೆಯು ಬೆಂಕಿಯ ಬಗ್ಗೆ ವದಂತಿಗಳನ್ನು ಹರಡಿದೆ. ಸೇತುವೆಯ ಮೇಲೆ ರೈಲು ಸುಮಾರು ಅರ್ಧ ಗಂಟೆ ನಿಂತಿತ್ತು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈಲಿನ ಬ್ರೇಕ್‌ಗಳನ್ನು ಸರಿಪಡಿಸಿದ ನಂತರ ರೈಲು ಚಲಿಸಲು ಅನುವು ಮಾಡಿಕೊಟ್ಟರು ಎಂದು ಹೇಳಿದ್ದಾರೆ.