ಮಂಜೇಶ್ವರ : ಮುಖ್ಯಮಂತ್ರಿಯಾಗಿ ಜನಸಂಪರ್ಕ ಕಾರ್ಯಕ್ರಮದ ಮೂಲಕ ಬಡಜನರ ಬಳಿಗೆ ತಲುಪಿ, ಅವರ ಕಣ್ಣೀರೊರೆಸಿದ ಊಮ್ಮನ್ ಚಾಂಡಿ ಕಾರುಣ್ಯಲೋಕದ ಮಹಾನ್ ಸಂತರಂತೆ ವಿರಾಜಿಸಿದವರು. ಜಗತ್ತನ್ನೇ ವಿಸ್ಮಯಗೊಳಿಸಿದ ಅವರ ಜನಸಂಪರ್ಕ ಕಾರ್ಯಕ್ರಮ ರಾಜಕೀಯ ಲೋಕದ ಅವಿಸ್ಮರಣೀಯ, ಸಮಾಜದ ಕಟ್ಟಕಡೆಯ ಜನರೆಡೆಗೆ ತಲುಪಿದ ಊಮ್ಮನ್ ಚಾಂಡಿ ಯಾವತ್ತೂ ಅಜರಾಮರ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ಜರುಗಿದ ಸರ್ವಪಕ್ಷ ಸಂತಾಪ ಸೂಚಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಡಲ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಶಾಫೀ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಸಂಕಬೈಲು ಸತೀಶ ಅಡಠಿ ಪ್ರಾಸ್ತಾವಿಕ ಮಾತನಾಡಿದರು. ಬಿ.ವಿ.ರಾಜನ್ (ಸಿಪಿಐ), ಪಿ.ಎಚ್.ಅಬ್ದುಲ್ ಹಮೀದ್ ( ಮುಸ್ಲಿಂ ಲೀಗ್), ಪ್ರಶಾಂತ್ ಕನಿಲ (ಸಿಪಿಎಂ) , ಹರಿಶ್ಚಂದ್ರ ಮಂಜೇಶ್ವರ (ಬಿಜೆಪಿ), ಅಶ್ರಫ್ ಬಡಾಜೆ (ಎಸ್ಡಿಪಿಐ), ಇಬ್ರಾಹಿಂ ಗೇರುಕಟ್ಟೆ (ಪಿಡಿಪಿ), ಅಶ್ರಫ್ ಉಪ್ಪಳ (ಎನ್ ಸಿಪಿ), ಅದ್ನಾನ್ (ವೆಲ್ಫೇರ್ ಪಾರ್ಟಿ), ಬಶೀರ್ ಕನಿಲ (ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ), ಅಶ್ರಫ್ ಫೈಝಿ ಕಡಂಬಾರು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕುಂಞಂಬು ನಂಬ್ಯಾರ್, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸೋಮಪ್ಪ, ಕಾಸರಗೋಡು ಜಿ.ಪಂ.ಸದಸ್ಯೆ ಕಮಲಾಕ್ಷಿ.ಕೆ, ಮಂಜೇಶ್ವರ ಗ್ರಾಮ ಪಂ.ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ, ಉಪಾಧ್ಯಕ್ಷ ಮೊಹಮ್ಮದ್ ರಫೀಕ್, ಬ್ಲಾಕ್ ಪಂಚಾಯತಿ ಸದಸ್ಯ ಹಮೀದ್ ಹೊಸಂಗಡಿ, ಪಿ.ಎಂ ಖಾದರ್ ಹಾಜಿ, ಮುಸ್ತಫಾ ಕಡಂಬಾರ್, ಅಹ್ಮದ್ ಮನ್ಸೂರ್ ಮುಂತಾದವರು ನುಡಿನಮನ ಸಲ್ಲಿಸಿದರು.