ತಿರುವನಂತಪುರಂ: ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಮಾರ್ಗದರ್ಶಕ ತತ್ವಗಳಲ್ಲಿ ಉಲ್ಲೇಖಿತವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಅಡ್ವ.ಪಿ ಸತೀದೇವಿ ಹೇಳಿದರು.
ದೇಶದಲ್ಲಿ ಜನಜೀವನಕ್ಕೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಿಗಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ ಎಂದು ಪಿ.ಸತಿದೇವಿ ಹೇಳಿದರು.
ಆಗ ಸಂವಿಧಾನ ರಚನೆಕಾರರ ಗುರಿ ಏನೆಂದರೆ ಭವಿಷ್ಯದ ಭಾರತ ಹೇಗಿರಬೇಕು ಎಂಬುದಾಗಿದ್ದಿರಬೇಕು. ಇಂದಿನ ಭಾರತೀಯ ಸಂದರ್ಭದಲ್ಲಿ ಸಮುದಾಯಗಳ ನಡುವಿನ ತಾರತಮ್ಯದ ಕಾನೂನುಗಳನ್ನು ಕೊನೆಗೊಳಿಸಬೇಕು. ಇದು ಹೇಗೆ ಸಾಧ್ಯ ಎಂಬ ಬಗ್ಗೆ ಗಂಭೀರ ಪರಿಶೀಲನೆ ಅಗತ್ಯ ಎಂದೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹೇಳಿರುವರು.
ವಿವಿಧ ಸಮುದಾಯಗಳಲ್ಲಿರುವ ಪುರುಷ ಮತ್ತು ಮಹಿಳೆಯರ ನಡುವಿನ ಅಸಮಾನತೆಗಳನ್ನು ನಿವಾರಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು. ಆ ಗುರಿ ತಲುಪಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಸತ್ಯ ಎಂದು ಸತೀದೇವಿ ತಿಳಿಸಿದರು.
ವೋಟ್ ಬ್ಯಾಂಕ್ ಗುರಿಯಾಗಿಟ್ಟುಕೊಂಡು ಕೇರಳದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಹಲವು ಮಂದಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗ ಏಕರೂಪ ನಾಗರಿಕ ಸಂಹಿತೆಯನ್ನು ತಿರಸ್ಕರಿಸದೆ ಪಿ.ಸತೀದೇವಿ ಅಚ್ಚರಿ ಮೂಡಿಸಿದ್ದಾರೆ.