ಅಲಿಗಢ್, ಉತ್ತರ ಪ್ರದೇಶ: ಐಸಿಸ್ ಉಗ್ರಗಾಮಿ ಸಂಘಟನೆ ಬೆಂಬಲದೊಂದಿಗೆ ಭಾರತದಲ್ಲಿ ದಾಳಿ ನಡೆಸಲು ಯೋಜಿಸಿದ್ಧ ಆರೋಪದ ಮೇಲೆ ಉತ್ತರ ಪ್ರದೇಶದ ಅಲಿಗಢ್ಮುಸ್ಲಿಂ ವಿಶ್ವವಿದ್ಯಾಲಯದ (AMU) 19 ವರ್ಷದ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ದಳದ (NIA) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ಜಾರ್ಖಂಡ್ ಮೂಲದ ಲೋಹರ್‌ದಾಗ್ ಮೂಲದ ಫೈಜಾನ್ ಅನ್ಸಾರಿ ಎಂದು ಗುರುತಿಸಲಾಗಿದೆ.
'ಫೈಜಾನ್ ಅನ್ಸಾರಿ ಸಾಮಾಜಿಕ ಮಾಧ್ಯಮಗಳ ಮೂಲಕ ಐಸಿಎಸ್ ಸಂಘಟನೆಯ ಸದಸ್ಯರ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿತ್ತು. ಅನುಮಾನದ ಆಧಾರದ ಮೇಲೆ ಫೈಜಾನ್‌ನ ಲೋಹರ್‌ದಾಗ್ ಮನೆ ಹಾಗೂ ಆಲಿಗಢ್‌ನ ಬಾಡಿಗೆ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ, ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಇರಾಕ್-ಸಿರಿಯಾದಲ್ಲಿ ಸಕ್ರಿಯವಾಗಿರುವ ಐಸಿಸ್ ಉಗ್ರಗಾಮಿ ಸಂಘಟನೆಯನ್ನು ಭಾರತದಲ್ಲಿ ಬೆಳೆಸುವುದು. ಅದಕ್ಕಾಗಿ ಯುವಕರನ್ನು ನೇಮಕ ಮಾಡಿಕೊಂಡು ಭಾರತದಲ್ಲಿ ದಾಳಿ ನಡೆಸುವ ತಯಾರಿಯಲ್ಲಿ ಆರೋಪಿ ಇದ್ದ' ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ಪಡೆ ಎಟಿಎಸ್ ಪೊಲೀಸರು ಸಹರಾನ್ಪುರ್‌ನಲ್ಲಿ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹಬೀಬುಲ್ಲಾ ಮಿಸ್ಬಾ (26), ಮತ್ತು ಅಹ್ಮದುಲ್ಲಾ (35) ಎಂದು ಗುರುತಿಸಲಾಗಿದೆ.
ಈ ಇಬ್ಬರು ಅಕ್ರಮ ದಾಖಲೆಗಳನ್ನು ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.