ನವದೆಹಲಿ: ಆಡಿಟ್‌ನಲ್ಲಿ ಗಂಭೀರ ಲೋಪವೆಸಗಿದ ಆರೋಪದ ಮೇರೆಗೆ ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ (NFRA) ಕೆಫೆ ಕಾಫೀ ಡೇ ಸಂಸ್ಥೆಯ ಇಬ್ಬರು ಲೆಕ್ಕಪರಿಶೋಧಕರು ಮತ್ತು 3 ಸಂಸ್ಥೆಗಳಿಗೆ 2.15 ಕೋಟಿ ರೂ ದಂಡ ವಿಧಿಸಿದೆ.
2019-20 ರಲ್ಲಿ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ನ (ಸಿಡಿಇಎಲ್) ಆಡಿಟ್‌ನಲ್ಲಿನ ಲೋಪ ಎಸಗಿದ್ದಕ್ಕಾಗಿ ಎರಡು ಲೆಕ್ಕಪರಿಶೋಧಕರು ಸೇರಿದಂತೆ ಮೂರು ಸಂಸ್ಥೆಗಳ ಮೇಲೆ ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ (NFRA) 2.15 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದ್ದು, ವಿವಿಧ ಅವಧಿಗಳಿಗಾಗಿ ಅವರಿಗೆ ನಿಷೇಧ ಹೇರಿದೆ.
ಸಿಡಿಇಎಲ್‌ನ ಏಳು ಅಂಗಸಂಸ್ಥೆಗಳಿಂದ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್‌ಗೆ (MACEL) 3,535 ಕೋಟಿ ರೂಪಾಯಿ ಮೌಲ್ಯದ ಹಣವನ್ನು ತಿರುಗಿಸಿದ ಪ್ರಕರಣ ಇದಾಗಿದ್ದು, ಕಾಫಿ ಡೇ ಗ್ಲೋಬಲ್ ಲಿಮಿಟೆಡ್ (CDGL) ಮತ್ತು MACEL ಪಟ್ಟಿ ಮಾಡಲಾದ ಘಟಕ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (CDEL) ನ ಅಂಗಸಂಸ್ಥೆಗಳಾಗಿವೆ.
ಈ ಪ್ರಕರಣ ಸಂಬಂಧ ಮಾರುಕಟ್ಟೆಗಳ ಕಾವಲುಗಾರ ಸಂಸ್ಥೆ ಸೆಬಿ ತನ್ನ ತನಿಖಾ ವರದಿಯನ್ನು ಏಪ್ರಿಲ್ 2022ರಲ್ಲಿ ಹಂಚಿಕೊಂಡಿತ್ತು. CDGLನ ಶಾಸನಬದ್ಧ ಲೆಕ್ಕಪರಿಶೋಧಕರ ವೃತ್ತಿಪರ ನಡವಳಿಕೆಯ ಬಗ್ಗೆ NFRA ತನಿಖೆಗಳನ್ನು ಪ್ರಾರಂಭಿಸಿತ್ತು.
ಪ್ರಕರಣದಲ್ಲಿ ಲೋಪ ಕಂಡು ಬಂದ ಹಿನ್ನೆಲೆ ಸೆಬಿ ತನ್ನ ಆದೇಶದಲ್ಲಿ ಎನ್‌ಎಫ್‌ಆರ್‌ಎ ಲೆಕ್ಕಪರಿಶೋಧನಾ ಸಂಸ್ಥೆ ಎಎಸ್‌ಆರ್‌ಎಂಪಿ ಮತ್ತು ಕೋ ಸಂಸ್ಥೆ ಮೇಲೆ 2 ಕೋಟಿ ರೂಪಾಯಿ ಮತ್ತು ಎಎಸ್ ಸುಂದರೇಶ ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದಲ್ಲದೆ, ಕ್ರಮವಾಗಿ ನಾಲ್ಕು ವರ್ಷ ಮತ್ತು 10 ವರ್ಷಗಳ ಅವಧಿಗೆ ಅವರಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ.