ಶಾಂತಿಕೇತನ: 'ಏಕರೂಪ ನಾಗರಿಕ ಸಂಹಿತೆಯು(ಯುಸಿಸಿ) ಜಟಿಲತೆಯಿಂದ ಕೂಡಿದ್ದು, ಅದನ್ನು ಸರಳಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಹಿಂದೂ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಂಪರ್ಕ ಹೊಂದಿದೆ' ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಹೇಳಿದರು.

ಏಕರೂಪ ನಾಗರಿಕ ಸಂಹಿತೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಂತಹ ಒಂದು ಅಸಂಬದ್ಧ ಪರಿಕಲ್ಪನೆ ಎಲ್ಲಿಂದ ಬಂತು ಎಂದು ನನಗೆ ತಿಳಿದಿಲ್ಲ. ಏಕರೂಪ ನಾಗರಿಕ ಸಂಹಿತೆ ಎನ್ನುವುದು ತುಂಬಾ ಕಠಿಣವಾದ ವಿಷಯವಾಗಿದೆ. ಇದೀಗ ಅದನ್ನು ಸುಲಭಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದರು.
'ನಮ್ಮ ನಡುವೆ ಭಿನ್ನಾಭಿಪ್ರಾಯಗಳಿವೆ, ಧರ್ಮಗಳಲ್ಲಿ ವ್ಯತ್ಯಾಸಗಳಿವೆ, ಆಚರಣೆ ಮತ್ತು ಪದ್ಧತಿಗಳಲ್ಲಿಯೂ ವ್ಯತ್ಯಾಸಗಳಿವೆ. ಆ ಭಿನ್ನಾಭಿಪ್ರಾಯಗಳನ್ನು ತೊಲಗಿಸಿ ಒಗ್ಗಟ್ಟಾಗಿರಬೇಕು' ಎಂದರು.
ಏಕರೂಪ ನಾಗರಿಕ ಸಂಹಿತೆ ಹಿಂದೂ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಂಪರ್ಕ ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಖಂಡಿತವಾಗಿಯೂ ಹೊಂದಿದೆ. ಆದರೆ ಹಿಂದೂ ರಾಷ್ಟ್ರ ಪರಿಕಲ್ಪನೆ ಪ್ರಗತಿಗೆ ಏಕೈಕ ಮಾರ್ಗವಲ್ಲ. ದೇಶದಲ್ಲಿ ಹಿಂದೂ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ' ಎಂದು ಹೇಳಿದರು.