ಕಾಸರಗೋಡು: ನಗರದ ಎಸ್‍ವಿಟಿ ರಸ್ತೆಯ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮೀ ವೃಂದಾವನ ಸೇವಾ ಸಮಿತಿ ವತಿಯಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮ ಅವರ 352ನೇ ಆರಾಧನಾ ಮಹೋತ್ಸವ ಸೆ. 1ರಂದು ಜರಗಲಿದೆ.
ಅಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, ಪಂಚಾಮೃತಾಭಿಷೇಕ, ವಿಷ್ಣು ಸಹಸ್ರನಾಮ, ಭಜನೆ, ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಅವರ ಶಿಷ್ಯವೃಂದದಿಂದ ಗುರುಸಂಸ್ಮರಣಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ವಿದ್ವಾನ್ ಪಾಂಡುರಂಗ ಪಟ್ಟಾಭಿರಾಮ ಪಂಡಿತ್ ಅವರ ಹಾಡುಗಾರಿಕೆ ನಡೆಯುವುದು. ವಿದ್ವಾನ್ ಎಲ್. ಅನಂತಪದ್ಮನಾಭ ವಾಯಲಿನ್, ವಿದ್ವಾನ್ ಪಿ. ಪುರುಷೋತ್ತಮ ಪುಣಿಂಚಿತ್ತಾಯ ಮೃದಂಗ, ವಿದ್ವನ್ ಬಾಲಕೃಷ್ಣ ಭಟ್ ಹೊಸಮೂಲೆ ಮೋರ್ಸಿಂಗ್ನಲ್ಲಿ ಸಹಕರಿಸುವರು.
ಮಧ್ಯಾಃನ 1.30ರಿಂದ ಮಧೂರು ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5ಕ್ಕೆ ಸಾರ್ವಜನಿಕ ಸತ್ಯನಾರಾಯಣಪೂಜೆ, 7.30ಕ್ಕೆ ಮಹಾಪೂಜೆ, ರಾತ್ರಿ 8ಕ್ಕೆ ವಿಶೇಷ ಹೂವಿನ ಪೂಜೆ, ರಂಗಪೂಜೆ ನಡೆಯಲಿರುವುದು.