ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಿಂದ ಹೊರಗುಳಿದಿರುವ 1031ಮಂದಿ ಸಂತ್ರಸ್ತರನ್ನು ಮರಳಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಎಂಡೋಸಲ್ಫಾನ್ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಆ.14ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು.
1905 ಏಪ್ರಿಲ್ 2017 ರಲ್ಲಿ ನಡೆಸಿದ ವಿಶೇಷ ವೈದ್ಯಕೀಯ ತಜ್ಞ ವೈದ್ಯರ ತಪಾಸಣೆಯಿಂದ 1905ಮಂದಿ ಸಂತ್ರಸ್ತರನ್ನು ಗುರುತಿಸಲಾಗಿದ್ದರೂ, ನಂತರ ಅದನ್ನು 287 ಕ್ಕೆ ಇಳಿಸಲಾಗಿತ್ತು. ಎಂಡೋಸಲ್ಫಾನ್ ವಿಕ್ಟಿಮ್ಸ್ ಪೀಪಲ್ಸ್ ಫ್ರಂಟ್‍ನ ಪ್ರಬಲ; ಹೋರಾಟದ ನಂತರ 587 ಮಂದಿಯನ್ನು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಸೇಪಡೆಗೊಳಿಸಲಾಗಿತ್ತು. ಆದರೆ ಬಾಕಿ ಉಳಿದಿರುವ 1031 ಮಂದಿಯ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ ಮತ್ತೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸಮಿತಿಪದಾಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತರ ಪಟ್ಟಿಯಲ್ಲಿರುವವರಿಗೆ ಉಚಿತ ಔಷಧ ಪೂರೈಕೆ ನಡೆಸಬೇಖು, ಪಿಂಚಣಿ ಬಾಕಿ ವಿತರಣೆ ತಕ್ಷಣ ನಡೆಸುವಂತೆಯೂ ಆಗ್ರಹಿಸಲಾಗಿದೆ. ಕಾಸರಗೋಡು ಸರ್ಕಾರಿ ಕಾಲೇಜು ವಠಾರದಿಂದ ಬೆಳಗ್ಗೆ 10ಕ್ಕೆ ಸಂತ್ರಸ್ತರ ಪೋಷಕರು, ತಾಯಂದಿರನ್ನೊಳಗೊಂಡ ಬೃಹತ್ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಲಿದೆ. ನಂತರ ನಡೆಯುವ ಪ್ರತಿಭಟನಾ ಸಭೆಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಮುಖಂಡರು ಭಾಗವಹಿಸಲಿದ್ದಾರೆ.