ನವದೆಹಲಿ: ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತಿಗೆ (ಸಿಎಸ್‌ಐಆರ್) ಸೇರಿದ ಪ್ರಯೋಗಾಲಯವು 108 ದಳಗಳನ್ನು ಹೊಂದಿದ ಕಮಲದ ಹೂವಿನ ತಳಿಯನ್ನು ಶನಿವಾರ ಅನಾವರಣಗೊಳಿಸಿದೆ.
ನವದೆಹಲಿ: ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತಿಗೆ (ಸಿಎಸ್‌ಐಆರ್) ಸೇರಿದ ಪ್ರಯೋಗಾಲಯವು 108 ದಳಗಳನ್ನು ಹೊಂದಿದ ಕಮಲದ ಹೂವಿನ ತಳಿಯನ್ನು ಶನಿವಾರ ಅನಾವರಣಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸೂಚಿಸುವ 'ನಮೋ-108' ಎಂದು ಈ ತಳಿಗೆ ನಾಮಕರಣ ಮಾಡಲಾಗಿದೆ.
'ಈ ಹೊಸ ತಳಿಯ ಕಮಲ 'ನಮೋ-108' ಪ್ರಧಾನಿ ಮೋದಿ ಅವರಿಗೆ ನೀಡಿರುವ ದೊಡ್ಡ ಉಡುಗೊರೆಯಾಗಿದೆ' ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
'ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ' (ಎನ್‌ಬಿಆರ್‌ಐ) ಈ ಕಮಲದ ತಳಿಯನ್ನು ಅಭಿವೃದ್ಧಿ ಪಡಿಸಿದೆ. ಮಾರ್ಚ್‌ನಿಂದ ಡಿಸೆಂಬರ್ ವರೆಗೆ ಹೂ ಬಿಡುವ ಈ ತಳಿಯು ಪೌಷ್ಟಿಕಾಂಶದಿಂದ ತುಂಬಿದೆ. ಕಮಲದ ಹೂವು ಹಾಗೂ ಸಂಖ್ಯೆ 108ಕ್ಕೆ ಧಾರ್ಮಿಕ ಮಹತ್ವವೂ ಇದೆ' ಎಂದೂ ಸಿಂಗ್ ಹೇಳಿದ್ದಾರೆ.
ಹೊಸ ತಳಿಯ ಕಮಲದ ಕುರಿತು ಎನ್‌ಬಿಆರ್‌ಐನ ಹೇಳಿಕೆಗಳನ್ನು ಕೆಲ ಸಂಶೋಧಕರು ಪ್ರಶ್ನಿಸಿದ್ದಾರೆ. '108 ದಳಗಳುಳ್ಳ ಕಮಲದ ಹೂವಿನ ಅಭಿವೃದ್ಧಿಗಾಗಿ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿದ್ದೇಕೆ' ಎಂದಿದ್ದಾರೆ.
'ಈ ಸಂಶೋಧನೆಗೆ ಯಾವ ವೈಜ್ಞಾನಿಕ ಮಹತ್ವ ಇದೆ' ಎಂದು ಭಾರತೀಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಸ್ಯವಿಜ್ಞಾನಿಯೊಬ್ಬರು ಪ್ರಶ್ನಿಸಿದ್ದಾರೆ.